ಹೈದರಾಬಾದ್:‘ಸಾರ್ಸ್–ಕೋವ್–2’ (ಕೊರೊನಾ ವೈರಸ್) ವೈರಸ್ ಸೋಂಕಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ‘ವಿನ್‌ಕೋವ್–19’ ಔಷಧಿಯ 2ನೇ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ.
ಔಷಧಿಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್ ವಿಶ್ವವಿದ್ಯಾಲಯ, ಸಿಎಸ್‌ಐಆರ್–ಸಿಸಿಎಂಬಿ ಹಾಗೂ ವಿಐಎನ್‌ಎಸ್ ಬಯೋಪ್ರಾಡಕ್ಟ್ಸ್ ಲಿಮಿಟೆಡ್, ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿರುವ ಕುರಿತು ಮಂಗಳವಾರ ಘೋಷಣೆ ಮಾಡಿವೆ.
ಕೊರೊನಾ ವೈರಸ್ ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ‘ಮೊದಲ ಔಷಧಿ’ ಇದಾಗಿದೆ ಎಂದು ಈ ಸಂಸ್ಥೆಗಳು ಹೇಳಿಕೊಂಡಿವೆ.
‘ವಿನ್‌ಕೋವ್–19’ನ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಸಿದ್ಧತೆ ನಡೆಯುತ್ತಿದ್ದು, ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಹ ಅನುಮತಿ ಕೋರಲಾಗಿದೆ ಎಂದು ಸಂಸ್ಥೆಗಳು ಹೇಳಿವೆ.
‘ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಪ್ರತಿಕಾಯಗಳಿರುವ ಈ ಔಷಧಿ ಭಾರತದಲ್ಲಿಯೇ ಮೊದಲು. ಈ ವೈರಸ್ ಸೋಂಕಿನ ಚಿಕಿತ್ಸೆಗೆ ಒಂದಕ್ಕಿಂತ ಹೆಚ್ಚು ಔಷಧಿಗಳ ಆಯ್ಕೆ ಹೊಂದಬೇಕಾಗಿರುವುದು ಅಗತ್ಯ’ ಎಂದು ಸಿಎಸ್‌ಐಆರ್–ಸಿಸಿಎಂಬಿ ನಿರ್ದೇಶಕ ಡಾ.ವಿನಯ್ ನಂದಿಕೂರಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.