ಬುಧವಾರ, ಜೂನ್ 23, 2021
30 °C

ಜೂನ್‌ 27ರಂದು ನಡೆಯಬೇಕಿದ್ದ ಯುಪಿಎಸ್‌ಸಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಜೂನ್‌ 27ರಂದು ನಡೆಸಲು ಉದ್ದೇಶಿಸಿದ್ದ ನಾಗರಿಕ ಸೇವೆಗಳ ಪ್ರಾಥಮಿಕ (ಪ್ರಿಲಿಮನರಿ) ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ಮುಂದೂಡಿದ್ದು, ಅದು ಅಕ್ಟೋಬರ್‌ 10ರಂದು ನಡೆಯಲಿದೆ.

‘ಸದ್ಯದ ಕೋವಿಡ್‌ ಪರಿಸ್ಥಿತಿಗಳಿಂದಾಗಿ ಜೂನ್‌ 27ರಂದು ನಡೆಯಬೇಕಿದ್ದ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಅಕ್ಟೋಬರ್‌ 10ರಂದು ಈ ಪರೀಕ್ಷೆ ನಡೆಯಲಿದೆ’ ಎಂದು ಆಯೋಗವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌), ಭಾರತೀಯ ಪೊಲೀಸ್ ಸೇವೆ (ಐಪಿಎಸ್‌) ಮತ್ತು ಇತರ ಇಲಾಖೆಗಳ ಅಧಿಕಾರಿಗಳ ನೇಮಕಾತಿಗಾಗಿ ಮೂರು ಹಂತಗಳಲ್ಲಿ (ಪ್ರಾಥಮಿಕ, ಪ್ರಧಾನ ಪರೀಕ್ಷೆ, ಸಂದರ್ಶನ) ಆಯೋಗವು ಪರೀಕ್ಷೆಗಳನ್ನು ನಡೆಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು