ನವದೆಹಲಿ: ಅಮೆರಿಕದ ಹಂಗಾಮಿ ರಾಯಭಾರಿ ಅತುಲ್ ಕೇಶಪ್ ಅವರು ಬುಧವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದರು.

‘ಭಾಗವತ್ ಅವರ ಜತೆ ಮಾತುಕತೆ ಉತ್ತಮವಾಗಿತ್ತು. ಭಾರತದ ವೈವಿಧ್ಯತೆ, ಪ್ರಜಾಪ್ರಭುತ್ವ, ಬಹುತ್ವವು ಶ್ರೇಷ್ಠ ರಾಷ್ಟ್ರದ ಶಕ್ತಿಗಳಾಗಿವೆ. ಇಂತಹ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು’ ಎಂದು ಕೇಶಪ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಕೇಶಪ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದರು.

ಕೇಶಪ್ ಅವರ ಅವಧಿ ಶೀಘ್ರ ಅಂತ್ಯವಾಗಲಿದೆ. ಹೀಗಾಗಿ, ಹಲವಾರು ಸರಣಿ ಸಭೆಗಳನ್ನು ನಡೆಸಿದ್ದಾರೆ. ಈಗಾಗಲೇ ಲಾಸ್ ಎಂಜಲಿಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಅಮೆರಿಕದ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ಸೆನೆಟ್ ಗಾರ್ಸೆಟ್ಟಿ ಅವರ ನೇಮಕಕ್ಕೆ ಇನ್ನೂ ಅನುಮೋದನೆ ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.