ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ 74ನೇ ಸ್ವಾತಂತ್ರ್ಯೋತ್ಸವ| ನ್ಯೂಯಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕವಿ ಸಮ್ಮೇಳನ, ಉಸ್ತಾದ್ ಅಮ್ಜದ್‌ ಆಲಿಖಾನ್ ಅವರಿಂದ ’ದಿ ಫ್ರೀಡಂ ಕನ್ಸರ್ಟ್‌’
Last Updated 11 ಆಗಸ್ಟ್ 2020, 6:20 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತದ74ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಈ ವಾರಾಂತ್ಯದಲ್ಲಿ ಅಮೆರಿಕದ ವಿವಿಧೆಡೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ‘ಕೋವಿಡ್ 19’ ಸೋಂಕಿನ ಕಾರಣದಿಂದಾಗಿ ಈ ಎಲ್ಲ ಕಾರ್ಯಕ್ರಮಗಳು ‘ವರ್ಚುವಲ್‌’ ಆಗಿ ನಡೆಯಲಿವೆ.

ಸ್ವಾಂತಂತ್ರ್ಯೋತ್ಸವದ ಅಂಗವಾಗಿ, ಅಮೆರಿಕದಲ್ಲಿರುವ ಜೈಪುರ್‌ ಫೂಟ್‌ ಸಂಸ್ಥೆಯು ಆಗಸ್ಟ್ 15ರಂದು ‘ವರ್ಚುವಲ್ ಕವಿ ಸಮ್ಮೇಳನ’ ಆಯೋಜಿಸಿದೆ. ಕೇಂದ್ರ ಸಂಸದೀಯ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಪಿ. ಪಿ.ಚೌಧರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.

ಪ್ರಸಿದ್ಧ ಕವಿಗಳಾದ ಮದನ್ ಮೋಹನ್ ಸಮರ್ ಮತ್ತು ಕುನ್ವಾರ್ ಅವರುಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಮೂಲಕ, ವಿಶ್ವ ಹಿಂದೂಗಳ ಬಹುದಿನಗಳ ಕನಸು ನನಸಾಗಿದೆ. ಹೀಗಾಗಿ ಈ ಬಾರಿಯ 74ನೇ ಸ್ವಾತಂತ್ರ್ಯೋತ್ಸವ ವಿಶೇಷವಾಗಿದೆ’ ಎಂದು ಜೈಪುರ್ ಫೂಟ್‌ ಸಂಸ್ಥೆಯ ಅಧ್ಯಕ್ಷ ಪ್ರೇಮ್‌ ಭಂಡಾರಿ ಹೇಳಿದ್ದಾರೆ.

ಅಮೆರಿಕದಲ್ಲಿರುವ ಪ್ರಮುಖ ಸಾಂಸ್ಕೃತಿಕ ಸಂಘಟನೆ ಇಂಡೊ–ಅಮೆರಿಕನ್ ಆರ್ಟ್‌ ಕೌನ್ಸಿಲ್‌ (ಐಎಎಸಿ), ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್‌ ಅಲಿಖಾನ್ ಅವರ ನೇತೃತ್ವದಲ್ಲಿ ‘ದಿ ಫ್ರೀಡಂ ಕನ್ಸರ್ಟ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.

‘ಈ ಕಾರ್ಯಕ್ರಮದಲ್ಲಿ ಉಸ್ತಾದ್‌ ಅಮ್ಜದ್ ಅಲಿಖಾನ್‌ ಅವರು ಸರೋದ್ ವಾದನದ ಜತೆಗೆ, 13ನೇ ಶತಮಾನದಲ್ಲಿ ಹಜರತ್ ಅಮೀರ್ ಖುಸ್ರೊ ಅವರು ಸಂಯೋಜನೆ ಮಾಡಿರುವ ‘ಆಯೇರಿ ಸಖಿ’ ಗೀತೆಯನ್ನೂ ಪ್ರಸ್ತುಪಡಿಸಲಿದ್ದಾರೆ’ ಎಂದು ಐಎಎಸಿ ತಿಳಿಸಿದೆ. ಈ ವರ್ಚುವಲ್ ಕಾರ್ಯಕ್ರಮದಲ್ಲಿ ‘ವೈಷ್ಣವ ಜನತೋ’ ಮತ್ತು ‘ರಾಮ್‌ ಧುನ್’ ಗೀತಗಾಯನವನ್ನೂ ಪ್ರಸ್ತುಪಡಿಸಲಾಗುತ್ತದೆ.

ನ್ಯೂಯಾಕ್‌ನ ಭಾರತೀಯ ರಾಯಭಾರ ಕಚೇರಿಯಲ್ಲೂ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ನೇರ ಪ್ರಸಾರವಾಗಲಿದ್ದು, ಈ ವರ್ಚುವಲ್ ಕಾರ್ಯಕ್ರಮಕ್ಕೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ಮತ್ತು ಸ್ನೇಹಿತರನ್ನು ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT