ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತುಗಳ ಮೂಲ ಎಲ್ಲಿ? ಬಳಕೆ ಎಲ್ಲಿ?

ಗಾಂಜಾ, ಅಫೀಮು, ಕೊಕೇನ್, ಹೆರಾಯಿನ್‌ ಉತ್ಪಾದನೆ ಹೆಚ್ಚು: ಅಂತರರಾಷ್ಟ್ರೀಯ ವರದಿ
Last Updated 7 ಸೆಪ್ಟೆಂಬರ್ 2020, 18:56 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಭಾರತದಲ್ಲಿ ಮಾದಕವಸ್ತುಗಳ ಬಳಕೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಕೆಲವು ಸ್ವರೂಪದ ಮಾದಕವಸ್ತುಗಳನ್ನು ವಿದೇಶಗಳಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಬಳಕೆಯಾಗುವ ಮಾದಕವಸ್ತುಗಳಲ್ಲಿ ಬಹುಪಾಲನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಉತ್ತರ ಅಮೆರಿಕ, ಯುರೋಪ್‌, ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳಿಗೆ ಭಾರತದಿಂದ ವಿಪರೀತ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಾಗುತ್ತದೆ ಎಂದುಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ ವರದಿ ಹೇಳುತ್ತದೆ.

ಭಾರತದಲ್ಲಿ ಗಾಂಜಾ, ಅಫೀಮು, ಕೊಕೇನ್ ಮತ್ತು ಹೆರಾಯಿನ್‌ ಬಳಕೆ ಹೆಚ್ಚು. ಮಾದಕ ಪದಾರ್ಥ ಬಳಕೆದಾರರಲ್ಲಿ 10–75 ವರ್ಷದ ವರೆಗಿನ ವಯೋಮಾನದವರು ಇದ್ದಾರೆ. ಮಾದಕ ವಸ್ತು ಬಳಕೆಯಲ್ಲಿ ಮಹಿಳೆಯರು ಮತ್ತು ಪುರುಷರು ಎಂಬ ಭೇದವೇನೂ ಇಲ್ಲ. ಮೇಲೆ ಹೇಳಿದ ಮಾದಕವಸ್ತುಗಳು ಮಾತ್ರವಲ್ಲದೆ, ಕೆಲವು ನಿಷೇಧಿತ ಔಷಧಗಳನ್ನೂ ನಶೆ ಏರಿಸಿಕೊಳ್ಳಲು ಬಳಸಲಾಗುತ್ತದೆ.ಮಾತ್ರೆಗಳು ಮತ್ತು ಲಸಿಕೆ ರೂಪದಲ್ಲಿ ಇವುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಇವುಗಳ ಬಳಕೆಯೂ ವ್ಯಾಪಕವಾಗಿ ಇದೆ. ನೋವು ನಿವಾರಕಗಳ ಹೆಸರಿನಲ್ಲಿ ಇವುಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ. ಔಷಧದ ಅಂಗಡಿಗಳಲ್ಲೂ ಇವುಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತದೆ ವರದಿ.

ಗಾಂಜಾ, ಅಫೀಮು ಮತ್ತು ಗಸಗಸೆಯನ್ನು ಭಾರತದಲ್ಲಿ ಅಕ್ರಮವಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಬೆಳೆಯುವ ಮಾದಕವಸ್ತುಗಳಲ್ಲಿ ಗಾಂಜಾದ ಪ್ರಮಾಣ ಅತ್ಯಂತ ಹೆಚ್ಚು. ದೇಶದಲ್ಲಿ ಐದಾರು ವರ್ಷಗಳಲ್ಲಿ ವಶಪಡಿಸಿಕೊಂ ಡಿರುವ ಗಾಂಜಾದ ಪ್ರಮಾಣವೇ ಇದನ್ನು ಪುಷ್ಟೀಕರಿಸುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಿಂದ ಕೊಕೇನ್ ಮತ್ತು ಹೆರಾಯಿನ್ ಭಾರತಕ್ಕೆ ಕಳ್ಳಸಾಗಣೆಯಾಗುತ್ತದೆ. ಭಾರತಕ್ಕೆ ಅಫ್ಘಾನಿಸ್ತಾನದ ಮೂಲಕ ಬರುತ್ತದೆ. ಇರಾನ್ ಮೂಲಕ ಹಡಗುಗಳಲ್ಲಿ ಭಾರತದ ಮಂಗಳೂರು, ಕೊಚ್ಚಿ, ಮುಂಬೈ ಬಂದರುಗಳಿಗೆ ಇವನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಹೀಗಾಗಿ ಈ ಬಂದರುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಮಾದಕವಸ್ತುಗಳನ್ನು ಜಫ್ತಿಮಾಡಲಾಗಿದೆ. ವಿಮಾನದ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ

*ಭಾರತದಿಂದ ಯೂರೋಪ್‌, ಅಮೆರಿಕ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಿಗೆ ಮಾದಕವಸ್ತುಗಳು ಕಳ್ಳಸಾಗಣೆಯಾಗುತ್ತವೆ. ನೇಪಾಳ ಮತ್ತು ಮ್ಯಾನ್ಮಾರ್‌ ಮೂಲಕ ಭಾರತದಿಂದ ಕಳ್ಳಸಾಗಣೆ ನಡೆಯುತ್ತದೆ. ಮ್ಯಾನ್ಮಾರ್‌ನಿಂದ ಆಫ್ರಿಕಾ, ದಕ್ಷಿಣ ಅಮೆರಿಕದ ರಾಷ್ಟ್ರಗಳಿಗೆ ಹಡಗು ಮತ್ತು ವಿಮಾನಗಳ ಮೂಲಕ ರವಾನೆಯಾಗುತ್ತದೆ

* ಅಪ್ಘಾನಿಸ್ತಾನದ ಮೂಲಕ ಅರಬ್‌ ರಾಷ್ಟ್ರಗಳಿಗೆ ರವಾನೆಯಾಗುತ್ತದೆ

* 3,446 ಹೆಕ್ಟೇರ್‌ನಷ್ಟು ಗಾಂಜಾ ಬೆಳೆಯನ್ನು 2017ರಲ್ಲಿ ಭಾರತದಲ್ಲಿ ನಾಶ ಮಾಡಲಾಗಿದೆ

* 1,980 ಹೆಕ್ಟೇರ್‌ನಷ್ಟು ಗಾಂಜಾ ಬೆಳೆಯನ್ನು 2018ರಲ್ಲಿ ಭಾರತದಲ್ಲಿ ನಾಶ ಮಾಡಲಾಗಿದೆ

* 266.5 ಟನ್‌ಗಳಷ್ಟು ಗಾಂಜಾವನ್ನು 2018ರಲ್ಲಿ ವಶಕ್ಕೆ ಪಡೆಯಲಾಗಿತ್ತು. 2018ರಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ವಶಕ್ಕೆ ಪಡೆಯಲಾದ ಗಾಂಜಾದಲ್ಲಿ ಭಾರತದ ಪಾಲು ಶೇ 79ರಷ್ಟು


ದೇಶದಲ್ಲಿ ವಶಕ್ಕೆ ಪಡೆದ ಅಫೀಮು
1.7 ಟನ್;2015
2.3 ಟನ್;2016
2.6 ಟನ್;2017
4.1 ಟನ್;2018

ಆಧಾರ: ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿ ವಾರ್ಷಿಕ ವರದಿ 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT