ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಹಾಕಿಸಿಕೊಂಡವರನ್ನು ಟ್ರೈನ್‌ನಲ್ಲಿ ಯಾಕೆ ಬಿಡುತ್ತಿಲ್ಲ–ಹೈಕೋರ್ಟ್‌ ಪ್ರಶ್ನೆ

Last Updated 2 ಆಗಸ್ಟ್ 2021, 8:45 IST
ಅಕ್ಷರ ಗಾತ್ರ

ಮುಂಬೈ: ಎರಡೂ ಡೋಸ್ ಕೋವಿಡ್‌ ಲಸಿಕೆ ಪಡೆದವರಿಗೆ ಮುಂಬೈಯ ಲೋಕಲ್ ಟ್ರೈನ್‌ಗಳಲ್ಲಿ ಪ್ರಯಾಣಿಸಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.

‘ಎರಡು ಡೋಸ್ ಲಸಿಕೆ ಪಡೆದ ಮೇಲೂ ಜನರು ತಮ್ಮ ಮನೆಗಳಲ್ಲೇ ಇರಬೇಕು ಎಂದು ನಿರೀಕ್ಷಿಸಿದರೆ ಲಸಿಕೆ ಪಡೆಯುವುದರ ಉದ್ದೇಶವಾದರೂ ಏನು?’ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿದ್ದ ಪೀಠ ಕೇಳಿತು.

ಮುಂಬೈಯ ಜೀವನಾಡಿಯೇ ಆಗಿರುವ ಲೋಕಲ್‌ ಟ್ರೈನ್‌ಗಳಲ್ಲಿ ಸದ್ಯ ಮುಂಚೂಣಿ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಅನುಮತಿ ನೀಡಲಾಗಿದೆ. ವಕೀಲರಿಗೆ, ನ್ಯಾಯಾಂಗದ ಸಿಬ್ಬಂದಿಗೆ ಪ್ರಯಾಣಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅವಕಾಶ ನೀಡಿಲ್ಲ ಎಂದು ಮಹಾರಾಷ್ಟ್ರದ ಅಡ್ವಕೇಟ್‌ ಜನರಲ್‌ ಆಶುತೋಷ್‌ ಕುಂಭಕೋಣಿ ಸಲ್ಲಿಸಿರುವ ಉತ್ತರವನ್ನು ಗಮನಿಸಿ ಪೀಠ ಈ ಪ್ರಶ್ನೆ ಮುಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT