ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Last Updated 28 ಡಿಸೆಂಬರ್ 2022, 14:35 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ಮಹಿಳೆಯೊಬ್ಬರ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರುಬುಧವಾರ ತಿಳಿಸಿದ್ದಾರೆ.

‘ಪ್ರಯಾಗ್‌ರಾಜ್‌ನಲ್ಲಿ ಓದುತ್ತಿರುವ ಮಹಿಳೆಯು ಯಾವುದೋ ಕೆಲಸದ ನಿಮಿತ್ತ ನೊಯಿಡಾಗೆ ಹೋಗಿದ್ದರು. ಕೆಲಸ ಮುಗಿದ ಬಳಿಕನೊಯಿಡಾದ ಸೆಕ್ಟರ್‌ 37ರಿಂದ ಉತ್ತರ ಪ್ರದೇಶದ ಔರೈಯದಲ್ಲಿರುವ ತನ್ನ ಮನೆಗೆ ಮಂಗಳವಾರ ರಾತ್ರಿ ಕಾರೊಂದರಲ್ಲಿ ತೆರಳುತ್ತಿದ್ದಾಗ ಚಾಲಕ ಹಾಗೂ ಆತನ ಪರಿಚಿತರು ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

‘ಕಾರಿನಲ್ಲಿದ್ದ ಇತರೆ ಪ್ರಯಾಣಿಕರು ಆಗ್ರಾ ಬಳಿಯಿರುವ ಕುಬೇರ್‌ಪುರದಲ್ಲಿ ಇಳಿದುಕೊಂಡ ಬಳಿಕ, ಔರೈಯಗೆ ಸಮೀಪದಲ್ಲಿರುವ ಫಿರೋಜಾಬಾದ್‌ಗೆ ತನ್ನನ್ನು ಕರೆದೊಯ್ಯುವುದಾಗಿ ಚಾಲಕ ಹೇಳಿದ್ದರಿಂದ ಸಂತ್ರಸ್ತೆಯು ಕಾರಿನಲ್ಲೇ ಉಳಿದಿದುಕೊಂಡಿದ್ದರು.ಕುಬೇರ್‌ಪುರದಿಂದ ಸ್ವಲ್ಪ ದೂರ ಹೋದ ಬಳಿಕ ಚಾಲಕನಿಗೆ ಪರಿಚಿತರಿರುವ ಇಬ್ಬರು ವ್ಯಕ್ತಿಗಳಿಗೆ ಕಾರಿನಲ್ಲಿ ಹತ್ತಿಕೊಂಡಿದ್ದಾರೆ. ಬಳಿಕ ಈ ಘಟನೆ ನಡೆದಿರುವುದಾಗಿ ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಅತ್ಯಾಚಾರದ ಬಳಿಕ ಆರೋಪಿಗಳು ಸಂತ್ರಸ್ತೆಯನ್ನು ಆಗ್ರಾ ಬಳಿಯ ಎತ್ಮಾದಪುರದಲ್ಲಿ ಬಿಟ್ಟು ಹೋಗಿದ್ದರು. ಸಂತ್ರಸ್ತೆಯು ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT