ಶುಕ್ರವಾರ, ನವೆಂಬರ್ 15, 2019
°C

ರವೀಶ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ

Published:
Updated:
Prajavani

ಮನಿಲಾ: ಭಾರತದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ ಏಷ್ಯಾದ ಅತ್ಯುನ್ನತ ಗೌರವವಾದ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 

ಈ ವೇಳೆ ಮಾತನಾಡಿದ ರವೀಶ್‌, ‘ಭಾರತದ ಮಾಧ್ಯಮ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಅದು ಅಚಾನಕ್ ಅಲ್ಲ ಅಥವಾ ಮನಬಂದಂತೆ ಆದುದಲ್ಲ. ಆದರೆ ವ್ಯವಸ್ಥಿತ ಮತ್ತು ರಚನಾತ್ಮಕವಾದುದು ಎಂದು ಹೇಳಿದರು. 

‘ಬಿಕ್ಕಟ್ಟಿನ ಕುರಿತು ಮೌಲ್ಯಮಾಪನ ಮಾಡುವುದು ಈಗ ಅತಿ ಹೆಚ್ಚು ಮುಖ್ಯವಾಗಿದೆ’ ಎಂದು ರವೀಶ್‌ ಹೇಳಿದರು.

ಎನ್‌ಡಿಟಿವಿ ಹಿರಿಯ ಕಾರ್ಯನಿರ್ವಹಣಾ ಸಂಪಾದಕರಾಗಿರುವ 44 ವರ್ಷದ ರವೀಶ್‌ ಅವರು ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಒಬ್ಬರು. 

ಇದನ್ನೂ ಓದಿ... ಆರ್ಥಿಕತೆ ಬಗ್ಗೆ ರವೀಶ್ ಕುಮಾರ್ ಹೇಳಿಕೆ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

ಪ್ರತಿಕ್ರಿಯಿಸಿ (+)