ಗುರುವಾರ , ನವೆಂಬರ್ 21, 2019
21 °C

ಕೊಲೆ: ಭಾರತೀಯ ಮೂಲದ ವ್ಯಕ್ತಿ ಬಂಧನ

Published:
Updated:

ಲಂಡನ್‌: ನೈರುತ್ಯ ಲಂಡನ್‌ನಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಗುರ್ಜೀತ್ ಸಿಂಗ್ ಲಾಲ್ (35) ಬಂಧಿತ ಆರೋಪಿ. ಸಂಗೀತಗಾರ ಮತ್ತು ರಗ್ಬಿ ಆಟಗಾರ ಅಲನ್ ಇಸಿಚೆ ಹತ್ಯೆಯಾದವರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ಪೊಲೀಸರ ವಶಕ್ಕೆ ನೀಡಲಾಗಿದೆ. ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ.

ಆಗಸ್ಟ್‌ 24ರಂದು ಕೊಲೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯಿದ್ದರೂ, ಸಾಕ್ಷಿ ನುಡಿಯಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

 

 

 

ಪ್ರತಿಕ್ರಿಯಿಸಿ (+)