ವಿಶ್ವ ಸ್ಮರಣಶಕ್ತಿ ಸ್ಪರ್ಧೆ: ಭಾರತದ ಬಾಲಕನಿಗೆ 2 ಚಿನ್ನದ ಪದಕ

7

ವಿಶ್ವ ಸ್ಮರಣಶಕ್ತಿ ಸ್ಪರ್ಧೆ: ಭಾರತದ ಬಾಲಕನಿಗೆ 2 ಚಿನ್ನದ ಪದಕ

Published:
Updated:
Prajavani

ಸಿಂಗಪುರ: ಹಾಂಗ್‌ಕಾಂಗ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ಮರಣಶಕ್ತಿ ಸ್ಪರ್ಧೆಯಲ್ಲಿ ಭಾರತ ಸಂಜಾತ ಬಾಲಕ ಎರಡು ಚಿನ್ನದ ಪದಕ ಗೆದ್ದಿದ್ದಾನೆ. 

ಮಕ್ಕಳ ವಿಭಾಗದಲ್ಲಿ ‘ಹೆಸರು ಮತ್ತು ವಸ್ತುಗಳು’ ಹಾಗೂ ‘ಪದಗಳು’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 56 ಮಕ್ಕಳನ್ನು ಸೋಲಿಸಿ ಧ್ರುವ್ ಮನೋಜ್(12) ಗೆಲುವು ಸಾಧಿಸಿದ್ದಾನೆ. 

ಚೀನಾ, ರಷ್ಯಾ, ಭಾರತ, ತೈವಾನ್ ಹಾಗೂ ಮಲೇಷ್ಯಾದ 260ಕ್ಕೂ ಹೆಚ್ಚು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಸಿಂಗಪುರ ಪ್ರತಿನಿಧಿಸಿದ್ದ ಏಕೈಕ ಬಾಲಕನಾದ ಧ್ರುವ್, ರೋಮನ್ ಪದ್ಧತಿಯ ಸ್ಮರಣಶಕ್ತಿ ತಂತ್ರದಲ್ಲಿ ಪರಿಣತಿ ಗಳಿಸಿದ್ದಾನೆ. ನೆನಪಿಟ್ಟುಕೊಳ್ಳಬೇಕಾದ ವಸ್ತುಗಳನ್ನು ತಮಗೆ ಪರಿಚಯವಿರುವ ಸ್ಥಳಗಳಲ್ಲಿನ ದೃಶ್ಯಗಳ ಜತೆಗೆ ಕಲ್ಪಿಸಿಕೊಳ್ಳುವುದು ಈ ತಂತ್ರದ ಕ್ರಮವಾಗಿದೆ. ಉದಾಹರಣೆಗೆ ತಮ್ಮ ಮನೆಯಲ್ಲಿನ ದೃಶ್ಯಗಳ ಜತೆಗೆ ವಸ್ತುಗಳನ್ನು ಕಲ್ಪಿಸಿಕೊಳ್ಳುವುದು. 

‘ಆಗಷ್ಟೆ ನನಗೆ ಹಾಗೂ ಸ್ನೇಹಿತರಿಗೆ ಪ್ರಾಥಮಿಕ ಶಾಲಾಭ್ಯಾಸ ಪರೀಕ್ಷೆ (ಪಿಎಸ್‌ಎಲ್‌ಇ) ಪೂರ್ಣಗೊಂಡಿತ್ತು. ನಾನು ಮಾತ್ರ ಈ ಸ್ಪರ್ಧೆ ಹೇಗೆ ಸಿದ್ಧತೆ ನಡೆಸಬೇಕೆಂದು ಗಮನಹರಿಸಬೇಕಿತ್ತು. ಇದು ಕೊಂಚ ಕಷ್ಟಕರವಾಗಿತ್ತು. ಆದರೂ ದಿನಕ್ಕೆ ನಾಲ್ಕರಿಂದ ಆರು ತಾಸು ಅಭ್ಯಾಸ ಮಾಡುತ್ತಿದ್ದೆ. ಇದರಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ಧ್ರುವ್ ಹೇಳಿದ್ದಾಗಿ ‘ಟುಡೆ’ ವರದಿ ಮಾಡಿದೆ. 

‘ಧ್ರುವ್ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂತಸಪಡುತ್ತಿದ್ದ ಎಂದು ತಿಳಿಯಿತು. ಉತ್ತಮ ಅಭ್ಯಾಸ ಮಾಡುತ್ತಿದ್ದ. ಆದ್ದರಿಂದ ಆತನಿಗೆ ಬೆಂಬಲಿಸಲು ನಿರ್ಧರಿಸಿದೆ’ ಎಂದು ತಂದೆ ಮನೋಜ್ ಪ್ರಭಾಕರ್ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !