ಹೆಸರಘಟ್ಟ: ಕೃಷಿ ಮಾಹಿತಿಗೆ ‘ಅರ್ಕಾ ಉದಾನ್’ ಆ್ಯಪ್‌

7
ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಿಂದ ವಿನ್ಯಾಸ

ಹೆಸರಘಟ್ಟ: ಕೃಷಿ ಮಾಹಿತಿಗೆ ‘ಅರ್ಕಾ ಉದಾನ್’ ಆ್ಯಪ್‌

Published:
Updated:
Prajavani

ಹೆಸರಘಟ್ಟ: ‘ಕೃಷಿಗೆ ಸಂಬಂಧಿಸಿದ ಮಾಹಿತಿ ನೋಡಲು ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಮೊಬೈಲ್ ಆ್ಯಪ್‌ ವಿನ್ಯಾಸಗೊಳಿಸಿರುವುದು ರೈತರಿಗೆ ವರದಾನವಾಗಲಿದೆ’ ಎಂದು ಹಣ್ಣು ಮತ್ತು ತರಕಾರಿ ವಿಭಾಗದ ನಿವೃತ್ತ ಮುಖ್ಯಸ್ಥ ಸಿ.ಪಿ. ಅಯ್ಯರ್ ಹೇಳಿದರು.

ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ವಿನ್ಯಾಸಗೊಳಿಸಿರುವ ‘ಅರ್ಕಾ ಉದಾನ್’ ಮೊಬೈಲ್ ಆ್ಯಪ್‌ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆ್ಯಪ್‌ನಲ್ಲಿ ಏನೇನಿದೆ?: ಸಂಸ್ಥೆಯ ನಿರ್ದೇಶಕ ಎಂ.ಅರ್. ದಿನೇಶ್ ಮಾತನಾಡಿ, ‘ಆ್ಯಪ್‌ನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಕೃಷಿ ಬಗ್ಗೆ ಕೈಗೊಳ್ಳುವ ಎಲ್ಲ ಮಾಹಿತಿಯನ್ನು ನೋಡಬಹುದಾಗಿದೆ. ಬೀಜಗಳ ಉತ್ಪಾದನೆ, ಕೃಷಿ ಯಂತ್ರೋಪಕರಣಗಳ ಲಭ್ಯತೆ, ಹೊಸ ಸಸ್ಯ ತಳಿಗಳು, ವಾತಾವರಣದ ವಿವರಗಳು, ಮಣ್ಣಿನ ಮಾಹಿತಿಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಬೆಳೆ ವಿಜ್ಞಾನಿಗಳ ದೂರವಾಣಿ ಸಂಖ್ಯೆ ಇದೆ. ಪ್ರಗತಿಪರ ರೈತರ ಅನುಭವಗಳೂ ಇವೆ’ ಎಂದರು.

ಈ ಆ್ಯಪ್‌ನ ಕನ್ನಡ ಅವತರಣಿಕೆಯೂ ಅಭಿವೃದ್ಧಿ ಹಂತದಲ್ಲಿದೆ. ಇನ್ನು 30 ದಿನಗಳಲ್ಲಿ ಈ ಆ್ಯಪ್‌ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ. ಗೂಗಲ್‌ ಪ್ಲೇಸ್ಟೋರ್‌ ಮೂಲಕ ಈ ಆ್ಯಪನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !