ಶುಕ್ರವಾರ, ಮೇ 29, 2020
27 °C

ಅಂತರರಾಷ್ಟ್ರೀಯ ನೃತ್ಯೋತ್ಸವ

ಮಾನಸ ಬಿ.ಆರ್‌. Updated:

ಅಕ್ಷರ ಗಾತ್ರ : | |

Prajavani

ಅನಿವಾಸಿ ಭಾರತೀಯರನ್ನೂ ಒಳಗೊಂಡಂತೆ ನೃತ್ಯ ಪ್ರಕಾರಗಳಲ್ಲಿ ವಿಭಿನ್ನತೆಯನ್ನು ಕಂಡುಕೊಂಡ ದೇಶ, ವಿದೇಶದ ಕಲಾವಿದರನ್ನು ಕರೆಸಿ  ಈ ಬಾರಿಯ ಅಂತರರಾಷ್ಟ್ರೀಯ ನೃತ್ಯೋತ್ಸವದಲ್ಲಿ ಅವಕಾಶ ನೀಡಲಾಗಿದೆ. 

ಜನವರಿ 9 ಮತ್ತು 10ರಂದು ಮಲ್ಲೇಶ್ವರದ 14ನೇ ಕ್ರಾಸ್‌ನಲ್ಲಿರುವ ಸೇವಾಸದನದಲ್ಲಿ ಸಂಜೆ 6ರಿಂದ ಕಾರ್ಯಕ್ರಮ ನಡೆಯಲಿದೆ. 

ಕಳೆದ ಹತ್ತು ವರ್ಷಗಳಿಂದ ಈ ಉತ್ಸವ ಆಯೋಜಿಸಲಾಗುತ್ತಿದೆ. ವ‌ರ್ಲ್ಡ್‌ ಡಾನ್ಸ್‌ ಅಲಯನ್ಸ್‌ (ಡಬ್ಲ್ಯುಡಿಎ) ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆರಂಭದಲ್ಲಿ ಕೇವಲ ಅನಿವಾಸಿ ಭಾರತೀಯರಿಗಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಭಾರತದ ಪ್ರತಿಭಾವಂತ ನೃತ್ಯ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದೆ. 

‘ಕಲಾಕ್ಷೇತ್ರದಲ್ಲಿ ಆಗುವ ಬೆಳವಣಿಗೆಗಳು, ಹೊಸ ಪ್ರಯೋಗಗಳನ್ನು ಮಾಡುವ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಈ ಬಾರಿ ಸಿಂಗಪುರ ಹಾಗೂ ಭಾರತದ ಕಲಾವಿದರು ಸೇರಿ ನೃತ್ಯ ಮಾಡುತ್ತಿದ್ದಾರೆ. ಮುದ್ರಿಕಾ ಫೌಂಡೇಷನ್‌ ಹಾಗೂ ಇಂಡಿಯನ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಬೆಂಗಳೂರು ತಂಡಗಳು ಇದರಲ್ಲಿ ಭಾಗವಹಿಸಲಿವೆ. ಸಿಂಗಪುರದ ಶೃತಿಲಯಾ ಡಾನ್ಸ್‌ ಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ’ ಎಂದು ಡಬ್ಲ್ಯುಡಿಎ ಸಂಸ್ಥೆಯ ಖಜಾಂಚಿ ಶಮಾ ಮಾಹಿತಿ ನೀಡಿದರು.

ಡಬ್ಲ್ಯುಡಿಎ ಸಂಸ್ಥೆ ಅಂತರರಾಷ್ಟ್ರೀಯವಾಗಿ ವಿಶ್ವದ ಎಲ್ಲಡೆ ನೃತ್ಯ ಉತ್ಸವವನ್ನು ಆಯೋಜಿಸುತ್ತಿದೆ. ಭಾರತದ ಕಲಾವಿದರಿಗೆ ಈ ಉತ್ಸವದಲ್ಲಿ ಉತ್ತಮ ಅವಕಾಶ ನೀಡಿದೆ. ಇಲ್ಲಿ ಬೇರೆ ದೇಶದ ಕಲಾವಿದರೊಂದಿಗೆ ಅವರು ಸಾಕಷ್ಟು ಹೊಸ ವಿಷಯಗಳನ್ನು ಕಲಿಯಲಿದ್ದಾರೆ. 

9ನೇ ಜನವರಿಯಂದು ಸುರಭಿ ಭಾರದ್ವಾಜ್‌ ಅವರು ಭರತನಾಟ್ಯ ಪ್ರದರ್ಶಿಸಲಿದ್ದಾರೆ. ಸಂಜಿತಾ ಭಟ್ಟಾಚಾರ್ಯ ಅವರು ಒಡಿಸ್ಸಿ ನೃತ್ಯ ಮಾಡಲಿದ್ದಾರೆ. 10ನೇ ಜನವರಿಯಂದು ಪೊನ್ನಮ್ಮ ದೇವಯ್ಯ ಕಥಕ್‌ ನೃತ್ಯ ಪ್ರದರ್ಶಿಸಿದರೆ, ದೀಪಿಕಾ ಕುಮಾರ್‌ ಹಾಗೂ ಪ್ರೀತಿಕಲಾ ಜೋಡಿಯಾಗಿ ಭರತನಾಟ್ಯ ಮಾಡಲಿದ್ದಾರೆ. ಸರಿತಾ ಮಿಶ್ರಾ ಹಾಗೂ ಅದ್ಯಶಾ ಮಿಶ್ರಾ ತಂಡ ಒಡಿಸ್ಸಿ ನೃತ್ಯ ಪ್ರದರ್ಶಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು