ಗುರುವಾರ , ನವೆಂಬರ್ 14, 2019
18 °C

ಚುನಾವಣೆ: ನೇತನ್ಯಾಹು ಭಾರತ ಭೇಟಿ ರದ್ದು

Published:
Updated:

ಜೆರುಸಲೇಂ (ಪಿಟಿಐ): ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ಸೆ. 9ರಂದು ಕೈಗೊಂಡಿದ್ದ ತಮ್ಮ ಭಾರತ ಭೇಟಿಯನ್ನು ರದ್ದುಪಡಿಸಿದ್ದಾರೆ.

ಇಸ್ರೇಲ್‌ ಚುನಾವಣೆ (ಸೆ. 17) ನಂತರ ಭಾರತ ಪ್ರವಾಸ ಕೈಗೊಳ್ಳುವು ದಾಗಿ ಹೇಳಿದ್ದಾರೆ. ನರೇಂದ್ರ ಮೋದಿ ಅವರಿಗೆ ನೇತನ್ಯಾಹು ಅವರು ಮಂಗಳವಾರ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ದೃಢಪಡಿಸಿದೆ. 

ನೇತನ್ಯಾಹು ತಮ್ಮ ಭಾರತ ಪ್ರವಾಸ ವನ್ನು ಮೊಟಕುಗೊಳಿಸುತ್ತಿರುವುದು ಇದು ಎರಡನೇ ಬಾರಿ. ಚುನಾವಣೆ ಕಾರಣವಾಗಿ ಇದೇ ಏಪ್ರಿಲ್‌ನಲ್ಲಿ ಅವರು ಪ್ರವಾಸ ರದ್ದುಗೊಳಿಸಿದ್ದರು.

ಪ್ರತಿಕ್ರಿಯಿಸಿ (+)