ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಬಲದ ಜಾಗತಿಕ ಸಮೀಕ್ಷೆ: ಭಾರತಕ್ಕೆ 4ನೇ ಸ್ಥಾನ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ದೇಶಗಳ ಸೇನಾ ಶಕ್ತಿ ಎಷ್ಟಿದೆ ಎಂಬ ಜಾಗತಿಕ ಸಮೀಕ್ಷೆ ಮತ್ತು ಅದರ ಆಧಾರದಲ್ಲಿ ನೀಡಲಾದ ರ‍್ಯಾಂಕಿಂಗ್‌ ಅನ್ನು ಗ್ಲೋಬಲ್‌ ಫೈರ್‌ ಪವರ್‌ ಸಂಸ್ಥೆಯು ಬಿಡುಗಡೆಗೊಳಿಸಿದೆ.

ಸೇನಾ ಶಕ್ತಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಭಾರತ ನಾಲ್ಕನೇ ಸ್ಥಾನ ಪಡೆದಿದೆ. 50 ಅಂಶಗಳ ಆಧಾರದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಸಣ್ಣ ಮತ್ತು ಹೆಚ್ಚು ಆಧುನಿಕವಾದ ದೇಶಗಳು ಮತ್ತು ದೊಡ್ಡ ಹಾಗೂ ಕಡಿಮೆ ಆಧುನಿಕವಾದ ದೇಶಗಳ ಸಾಮರ್ಥ್ಯವನ್ನು ಅಳೆಯುವುದಕ್ಕೆ ಬೇಕಾದ ರೀತಿಯಲ್ಲಿ ಸೂತ್ರವನ್ನು ಅಭಿವೃದ್ಧಿಪಡಿಸಲಾಗಿತ್ತು. ಬೋನಸ್‌ ಅಂಕ ಮತ್ತು ದಂಡನಾ ಅಂಕಗಳ ನೀಡಿಕೆ ಮೂಲಕ ಎಲ್ಲ ದೇಶಗಳಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಅಂಕ ನೀಡಿಕೆಗೆ ಪರಿಗಣನೆ
* ಶಸ್ತ್ರಾಸ್ತ್ರದ ಒಟ್ಟು ಸಂಖ್ಯೆಯನ್ನು ಮಾತ್ರ ಆಧರಿಸಿ ಶ್ರೇಣಿ ನೀಡಲಾಗಿಲ್ಲ. ಶಸ್ತ್ರಾಸ್ತ್ರ ವೈವಿಧ್ಯ ಮತ್ತು ಸಮತೋಲನಕ್ಕೆ ಒತ್ತು ನೀಡಲಾಗಿದೆ.

* ದೇಶಗಳ ಜನಸಂಖ್ಯೆ ಆಧಾರದಲ್ಲಿಯೂ ಅಂಕ ನೀಡಲಾಗಿದೆ. ಯುದ್ಧಕ್ಕೆ ಹೋಗುವ ಸಾಮರ್ಥ್ಯ ಇರುವ ಜನರ ಸಂಖ್ಯೆ (ಸೈನಿಕರಲ್ಲದೆ) ಎಷ್ಟು ಎಂಬುದರ ಅಧಾರದಲ್ಲಿಯೂ ಅಂಕ ನೀಡಲಾಗಿದೆ.

* ಅಣ್ವಸ್ತ್ರ ಇದೆ ಎಂದು ಘೋಷಿಸಿರುವ ಅಥವಾ ಘೋಷಿಸಿಲ್ಲದ ದೇಶಗಳಲ್ಲಿ ಇರುವ ಅಣ್ವಸ್ತ್ರಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಆದರೆ ಈ ದೇಶಗಳಿಗೆ ಬೋನಸ್‌ ಅಂಕ ನೀಡಲಾಗಿದೆ.

* ಭೌಗೋಳಿಕ ಅಂಶಗಳು, ನೈಸರ್ಗಿಕ ಸಂಪನ್ಮೂಲ, ಸ್ಥಳೀಯ ಕೈಗಾರಿಕೆಯ ಪ್ರಭಾವಗಳಿಗೂ ಅಂಕ ನೀಡಲಾಗಿದೆ.

* ಎಲ್ಲೆಡೆಯಿಂದಲೂ ನೆಲದಿಂದ ಆವೃತವಾಗಿರುವ ದೇಶಗಳಲ್ಲಿ ನೌಕಾಪಡೆ ಇಲ್ಲ ಎಂಬುದಕ್ಕೆ ಅಂಕ ಕಡಿತಗೊಳಿಸಲಾಗಿಲ್ಲ.

* ನೌಕಾಪಡೆಗಳಿರುವ ದೇಶಗಳಲ್ಲಿ ವೈವಿಧ್ಯಮಯ ನೌಕೆಗಳು ಇಲ್ಲದಿದ್ದಾಗ ಅಂಕ ಕಡಿತ ಮಾಡಲಾಗಿದೆ.

* ನ್ಯಾಟೊ ಮಿತ್ರಕೂಟದ ನಡುವೆ ಸಂಪನ್ಮೂಲ ಹಂಚಿಕೆಗೆ ಅವಕಾಶ ಇರುವುದರಿಂದ ಈ ದೇಶಗಳಿಗೆ ಬೋನಸ್‌ ಅಂಕ ಸಿಕ್ಕಿದೆ.

* ರಾಜಕೀಯ ಮತ್ತು ಸೇನೆಯ ಈಗಿನ ನಾಯಕತ್ವವನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

133 ದೇಶಗಳ ಸಮೀಕ್ಷೆ ನಡೆಸಲಾಗಿದೆ

ಸೈನಿಕರ ಸಂಖ್ಯೆ
1. ಚೀನಾ 22,60,000
2. ಅಮೆರಿಕ 13,73,650
3. ಭಾರತ 13,62,500
4. ಉತ್ತರ ಕೊರಿಯಾ 9,45,000
5. ರಷ್ಯಾ 7,98,527
6. ಪಾಕಿಸ್ತಾನ 6,37,000

ಯುದ್ಧವಿಮಾನ/ಹೆಲಿಕಾಪ್ಟರ್‌
1. ಅಮೆರಿಕ 13,762
2. ರಷ್ಯಾ  3,794
3. ಚೀನಾ 2,955
4. ಭಾರತ 2,101
5. ಜಪಾನ್‌ 1,594
10. ಪಾಕಿಸ್ತಾನ 951

ಯುದ್ಧ ಟ್ಯಾಂಕ್‌ಗಳು
1. ರಷ್ಯಾ 20,216
2. ಚೀನಾ 6,457
3. ಅಮೆರಿಕ 5,884
4. ಉತ್ತರ ಕೊರಿಯಾ 5,025
5. ಸಿರಿಯಾ 4,640
6. ಭಾರತ 4,426
8. ಪಾಕಿಸ್ತಾನ 2,924

ನೌಕಾಬಲ
1. ಉತ್ತರ ಕೊರಿಯಾ 967
2. ಚೀನಾ 714
3. ಅಮೆರಿಕ 415
4. ಇರಾನ್‌ 398
5. ರಷ್ಯಾ 352
6. ಈಜಿಪ್ಟ್‌ 319
7. ಭಾರತ 295
11. ಪಾಕಿಸ್ತಾನ 197

ಸಮಗ್ರ ರ‍್ಯಾಂಕಿಂಗ್‌
1. ಅಮೆರಿಕ
2. ರಷ್ಯಾ
3. ಚೀನಾ
4. ಭಾರತ
13. ಪಾಕಿಸ್ತಾನ

ರಕ್ಷಣಾ ಬಜೆಟ್‌
1. ಅಮೆರಿಕ  5.87 ಲಕ್ಷ ಕೋಟಿ ಡಾಲರ್‌ (ಅಂದಾಜು ₹410 ಲಕ್ಷ ಕೋಟಿ ರೂಪಾಯಿ)
2. ಚೀನಾ 1.61 ಲಕ್ಷ ಕೋಟಿ ಡಾಲರ್‌ (ಸುಮಾರು ₹ 100 ಲಕ್ಷ ಕೋಟಿ)
3. ಸೌದಿ ಅರೇಬಿಯಾ 56,725 ಕೋಟಿ ಡಾಲರ್‌ (ಸುಮಾರು ₹37 ಲಕ್ಷ ಕೋಟಿ)
4. ಭಾರತ 51,000 ಕೋಟಿ ಡಾಲರ್‌ (32,500 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT