ಫೆ.26ಕ್ಕೆ ರಾಷ್ಟ್ರೀಯ ಸಮ್ಮೇಳನ

7

ಫೆ.26ಕ್ಕೆ ರಾಷ್ಟ್ರೀಯ ಸಮ್ಮೇಳನ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಆರ್ಥಿಕ ಪರಿಷತ್ತು ವತಿಯಿಂದ ಫೆ.26ರಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

‘ತುಮಕೂರಿನಿಂದ ಚಿತ್ರದುರ್ಗಕ್ಕೆ ರೈಲು ಸೇವೆ ಕಲ್ಪಿಸಬೇಕು. ಚಿತ್ರದುರ್ಗಕ್ಕೆ ರೈಲಿನ ಭಾಗ್ಯವಿಲ್ಲದೆ ಸುತ್ತಮುತ್ತ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ತೊಡಕು ಉಂಟಾಗುತ್ತಿರುವುದರ ಕುರಿತು ಸಮ್ಮೇಳನದಲ್ಲಿ ಆರ್ಥಿಕ ತಜ್ಞರಾದ ಜನಾರ್ದನ್, ಬಿ.ಕೆ.ರಂಗಪ್ಪ ಅವರು ವಿಷಯ ಮಂಡಿಸಲಿದ್ದಾರೆ’ ಎಂದು ಪರಿಷತ್ತು ಅಧ್ಯಕ್ಷ ಆರ್.ಜಯಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ಬಜೆಟ್‌ ಮಂಡನೆಯ ಕುರಿತು ಜನಾಭಿಪ್ರಾಯ ಸಂಗ್ರಹಿಸಿ, ಅದರಿಂದಾಗಿರುವ ಲೋಪದೋಷಗಳನ್ನು ತಜ್ಞರು ವರದಿ ಮಾಡಲಿದ್ದಾರೆ. ಆ ವರದಿಯನ್ನು ಸರ್ಕಾರಕ್ಕೂ ಸಲ್ಲಿಸುತ್ತೇವೆ. ಅನಾಥ ಸೇವಾ ಆಶ್ರಮ ಟ್ರಸ್ಟ್ ಸಹಯೋಗದೊಂದಿಗೆ ಸಮ್ಮೇಳನ ನಡೆಯಲಿದೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !