ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಅಂಚೆ

Last Updated 25 ನವೆಂಬರ್ 2019, 19:45 IST
ಅಕ್ಷರ ಗಾತ್ರ

‘ಮಲೆ’ಯಂಚಿನ ಗ್ರಾಮಗಳಲ್ಲಿ ಹುಟ್ಟು–ಸಾವು ಸೆಣಸಾಟ’ – ಸುಶೀಲ ಡೋಣೂರ ಅವರ ಲೇಖನ ಓದುವಾಗ ಕಣ್ಣೀರು ಕೆನ್ನೆಯ ಮೇಲೆ ಇಳಿಯಿತು. ಲೋಕಿ ಅವರ ಮಾತು ಮೈಯೆಲ್ಲಾ ನಡುಕ ಹುಟ್ಟಿಸಿತು. ಆರೋಗ್ಯ ಸೌಲಭ್ಯ ಮರೀಚಿಕೆ ಆಗಿರುವ ಈ ಹಾಡಿಗಳಿಗೆ ಕನಿಷ್ಠ ರಸ್ತೆ ಇಲ್ಲದಿರುವುದು ದುರದೃಷ್ಟಕರ. ಬರಹ ಕೆಲವರ ಕಣ್ಣಾದರೂ ತೆರೆಸಿದರೆ ಸಾರ್ಥಕ ಆಗುತ್ತದೆ. ‘ಕೃಷಿ ಕಣಜ’ದಲ್ಲಿನ ಬಿ.ಎಸ್.ಹರೀಶ್ ಅವರ ‘ಶುಂಠಿ ಬೆಳೆಯುವ ಮುನ್ನ’ ಲೇಖನ ಮಾಹಿತಿಪೂರ್ಣವಾಗಿತ್ತು ಮತ್ತು ಬಹಳ ಉಪಯೋಗಕರ.

- ಬಿ. ಆರ್. ಅಣ್ಣಾಸಾಗರ, ಸೇಡಂ

ಮಲೆಯಂಚಿನ ಗ್ರಾಮಗಳ ಸಂಕಟದ ಲೇಖನ ಓದುತ್ತಿದ್ದಾಗ ಹಿಂದೊಮ್ಮೆ ನಾಗಮಲೆಗೆ ಭೇಟಿ ಕೊಟ್ಟಿದ್ದ ನೆನಪಾಯ್ತು. ಜಿಲ್ಲಾ ಕೇಂದ್ರದಲ್ಲಿ ಕಲಾ ಗ್ಯಾಲರಿ ನಿರ್ಮಿಸಿರುವ ಕರಿಯಪ್ಪ ಹಂಚಿನಮನಿ ಅವರಿಗೆ ಧನ್ಯವಾದಗಳು. ಏಕವಾದಕ ಹನುಮಯ್ಯರವರ ಕಲಾಸೇವೆ ಮೆಚ್ಚುವಂತಹದು. ಚಿಕ್ಕವನಿದ್ದಾಗ ಒಮ್ಮೆ ಸಂತೆಯಲ್ಲಿ ಇದನ್ನು ನೋಡಿದ ನೆನಪಾಯ್ತು. ಆ್ಯಪಲ್ ಬದನೆ ಲೇಖನ ಉಪಯುಕ್ತ ಮಾಹಿತಿ ನೀಡಿದೆ. ಈ ಸಂಚಿಕೆ ತುಂಬಾ ಕುತೂಹಲಕಾರಿ ವಿಷಯಗಳನ್ನು ಕೊಟ್ಟಿದೆ.

- ಕುಣಿಗಲ್ ಜಯಣ್ಣ, ಗಿಡದ ಕೆಂಚನಹಳ್ಳಿ

‘ಮಲೆಯಂಚಿನ ಗ್ರಾಮಗಳಲ್ಲಿ ಹುಟ್ಟು–ಸಾವು ಸೆಣೆಸಾಟ’ ಲೇಖನ ಓದುತ್ತಿದ್ದಂತೆ ಮನಸ್ಸು ವ್ಯಗ್ರಗೊಂಡಿತು. ಜನಪ್ರತಿನಿಧಿಗಳ ಬಗ್ಗೆ, ಸರ್ಕಾರದ ವಿರುದ್ಧ ಬೇಸರ ಹುಟ್ಟಿದೆ. ಇವರೆಲ್ಲರ ಧೋರಣೆ ಅಕ್ಷಮ್ಯ ಎನ್ನಿಸಿತು. ಒಟ್ಟಾರೆ ಇದು ಎಲ್ಲರ ಕಣ್ತೆರೆಸುವ ಲೇಖನ.

- ಶಿವಮೊಗ್ಗ ರಮೇಶ್, ಮೈಸೂರು

‘ಏಲಕ್ಕಿ ನಗರದಲ್ಲಿ ಕಲಾ ಗ್ಯಾಲರಿ’ – ರಮೇಶ್ ಚೆಂಡಪ್ಪನವರ್ ಅವರ ಲೇಖನ ಗ್ರಾಮೀಣ ಕಲಾವಿದರ ಚಿತ್ರಕಲೆ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡುವುದನ್ನು ಉಲ್ಲೇಖಿಸಿದೆ. ಈ ನಿಟ್ಟಿನಲ್ಲಿ ಕರಿಯಪ್ಪನವರ ಕಾರ್ಯ ಶ್ಲಾಘನೀಯ. ಅದರಂತೆ ಕಲಾ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಒಂದು ಜಾಗವನ್ನು ಮಾಡಿದರೆ ಒಳ್ಳೆಯದು. ಹಕ್ಕಿಪಿಕ್ಕಿಗಳ ಶ್ರಮ ನಿಜಕ್ಕೂ ಅಚ್ಚರಿ ಮೂಡಿಸಿತು. ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ. ‘ಶುಂಠಿ ಬೆಳೆಯುವ ಮುನ್ನ’ ಲೇಖನ ರೈತರಿಗೆ ಸಮಗ್ರ ಮಾಹಿತಿ ಒದಗಿಸಿದೆ.

- ವಿನಾಯಕ. ಆರ್. ರಾಯಚೂರು

‘ಏಕವಾದಕ’– ಹನುಮಯ್ಯನ ಕುರಿತ ಲೇಖನ ಓದಿದಾಗ, ನನಗೆ ಬಾಲ್ಯ ನೆನಪಾಯಿತು. ಮಹಾಭಾರತ ಆಧಾರಿತ ನಾಟಕಗಳಲ್ಲಿ ಈ ವಾದನ ಬಳಸಲಾ ಗುತ್ತಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಆಂಜನಪ್ಪ, ಶಹನಾಯಿ ವಾದನದಿಂದಲೇ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಈ ವಾದನಕ್ಕೆ ಇಂತಹವರೇ ಕೊನೆಯ ಕೊಂಡಿ ಎಂಬುದನ್ನು ನೆನೆದಾಗ ಕಣ್ಣಂಚಲ್ಲಿ ನೀರು ಜಿನುಗಿತು.

- ಯಲುವನಹಳ್ಳಿ ಸೊಣ್ಣೆಗೌಡ, ಚಿಕ್ಕಬಳ್ಳಾಪುರ

‘ಕೃಷಿ ಕಣಜ’ದಲ್ಲಿ ಮೂಡಿ ಬಂದ ‘ಶುಂಠಿ ಬೆಳೆಯುವ ಮುನ್ನ’ ಲೇಖನ ಕೃಷಿಕರಿಗೆ ಕೈಪಿಡಿಯಂತಿದೆ. ಪರಿಣತ ಕೃಷಿತಜ್ಞರು ಬರೆದ ಈ ಬರಹವು ಮಾದರಿ ಲೇಖನವಾಗಿದೆ. ಯಾವ ಸಂದೇಹ ಹಾಗೂ ಪ್ರಶ್ನೆಗಳನ್ನು ಉಳಿಸದೇ ಸಮಗ್ರ ಮಾಹಿತಿಯನ್ನು ರೈತರಿಗೆ ಒದಗಿಸಿದ ಲೇಖನವಿದು. ವಿಜ್ಞಾನಿಗಳ ಹಾಗೂ ತಜ್ಞರ ಇಂತಹ ಲೇಖನಗಳು ಮತ್ತಷ್ಟು ಮೂಡಿಬರಲಿ.

ಮಹಾಂತೇಶ ಗ.ಓಶಿಮಠ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT