ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಕಿ.ಮೀ ಉದ್ದದ ಫೋಟೊ ಬಯೊಗ್ರಫಿ: ಸಿದ್ದರಾಮಯ್ಯ ಜನ್ಮದಿನಕ್ಕೆ ಅಭಿಮಾನಿಗಳ ಕಾಣಿಕೆ

Last Updated 1 ಆಗಸ್ಟ್ 2022, 9:28 IST
ಅಕ್ಷರ ಗಾತ್ರ

ಬೆಳಗಾವಿ: ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು 3 ಕಿ.ಮೀ ಉದ್ದದ ಫೋಟೊ ಬಯೊಗ್ರಫಿ ಒಂದನ್ನು ಸವದತ್ತಿಯ ಅಭಿಮಾನಿಗಳು ಸಿದ್ಧಪಡಿಸಿದ್ದಾರೆ.

ಸವದತ್ತಿಯ ಕಾಂಗ್ರೆಸ್‌ ಮುಖಂಡ ಸೌರಭ ಚೋಪ್ರಾ ಮಾರ್ಗದರ್ಶನದಲ್ಲಿ ‘ಆನಂದ ಚೋಪ್ರಾ ಅವರ ಅಭಿಮಾನಿ ಬಳಗ‘ದವರು ಈ ಬಯೊಗ್ರಫಿ ಸಿದ್ಧ‍ಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಫೋಟೊಗಳನ್ನು ಬಳಸಿ ಇದನ್ನು ಮಾಡಲಾಗಿದೆ.

ಬೇರೆಬೇರೆ ಸಂದರ್ಭಗಳಿಗೆ ಸಾಕ್ಷಿಯಾದ 500 ಫೋಟೊಗಳನ್ನು ಸಂಗ್ರಹಿಸಿ, ಎಲ್ಲವನ್ನೂ 3 ಕಿ.ಮೀ ಉದ್ದದ ಬಟ್ಟೆಯ ಮೇಲೆ ಪ್ರಿಂಟ್‌ ಹಾಕಿಸಲಾಗಿದೆ. ಇದರ ಅಗಲ 6.5 ಮೀಟರ್‌ ಇದೆ. ಗುರು ಬಿಗ್ ಬಿ ಆರ್ಟ್ಸ್ ಡಿಸೈನ್‌ನ ಮೌನೇಶ ಬಡಿಗೇರ ಈ ಫೋಟೊಗಳಿಗೆ ಬಯೊಗ್ರಫಿ ರೂಪ ಕೊಟ್ಟಿದ್ದಾರೆ. ಸೂರತ್‌ನಲ್ಲಿ ಮುದ್ರಿಸಲಾಗಿದೆ. ಇದಕ್ಕಾಗಿ ₹ 8 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮುಖಂಡರು ಹೇಳಿದ್ದಾರೆ.

‘ದಾವಣಗೆರೆಯಲ್ಲಿ ಸಮಾರಂಭದ ವೇದಿಕೆಯಿಂದ 3 ಕಿ.ಮೀ ದರೂದಲ್ಲಿ ಸಿದ್ದರಾಮಯ್ಯ ಅವರೇ ಇದನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಂದ ವೇದಿಕೆಯವರೆಗೂ ಇದನ್ನು ಚಾಚಿ, ಪ್ರದರ್ಶನಕ್ಕೆ ಇಡಲಾಗುವುದು. ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಈ ಕಾಣಿಕೆ ನೀಡುತ್ತಿದ್ದೇವೆ’ ಎಂದು ಸೌರಭ ಚೋಪ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT