ಮಂಗಳವಾರ, ಅಕ್ಟೋಬರ್ 20, 2020
23 °C
ಕಲಬುರ್ಗಿ ಬಳಿ ಲಾರಿಗೆ ಕಾರ್‌ ಡಿಕ್ಕಿ

ಲಾರಿಗೆ ಕಾರು ಡಿಕ್ಕಿ: ಗರ್ಭಿಣಿ ಸೇರಿ ಏಳು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಸಾವಳಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಏಳು ಜನ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಭಾನುವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ.

ಇವರಲ್ಲಿ ಒಬ್ಬ ಗರ್ಭಿಣಿ ಇರ್ಫಾನಾ ಬೇಗಂ (25) ಸೇರಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ. ಇನ್ನೊಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಆಳಂದದ ನಿವಾಸಿಗಳಾಗಿದ್ದು, ಸಹೋದರ ಸಂಬಂಧಿಕರು.

ಘಟನೆ ವಿವರ: ಇರ್ಫಾನಾ ಅವರಿಗೆ ಭಾನುವಾರ ನಸುಕಿನ 3 ಗಂಟೆಗೆ ಹೆರಿಗೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಕುಟುಂಬದವರು ಆಳಂದದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅವರಿಗೆ ರಕ್ತದೊತ್ತಡ ತೀವ್ರ ಕಡಿಮೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದರು. ತಕ್ಷಣವೇ
ಕುಟುಂಬದವರು ನಸುಕಿನ 4ಕ್ಕೆ ಸಂಬಂಧಿಕರಾದ ಮುನೀರ್‌ ಅವರ ಕಾರ್‌ ಮಾಡಿಕೊಂಡು ಕಲಬುರ್ಗಿಯತ್ತ ವೇಗವಾಗಿ ಹೊರಟರು.

ಕಲಬುರ್ಗಿ ತಲುಪಲು ಇನ್ನು 15 ಕಿ.ಮೀ ಅಂತರದಲ್ಲಿ ಸಾವಳಗಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಒಂದೆಡೆ ಲಾರಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದರೆ, ಮತ್ತೊಂದೆಡೆ ಕಾರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. 

ಅಪಘಾತವಾಗಿ ಎರಡು ತಾಸಿನ ನಂತರವೂ ಶವಗಳನ್ನು ವಾಹನದಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಗ್ರಾಮದ ಯುವಕು ಕಾರಿನ ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.