ಮೈಸೂರು: ‘ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹತ್ತು ಪೈಸೆ ಖರ್ಚು ಮಾಡುವ ಅಧಿಕಾರವೂ ಇಲ್ಲವಾಗಿದೆ. ಖರ್ಚು ಮಾಡುವ ಅಧಿಕಾರವಿದ್ದರೆ, ಅದು ವಿಜಯೇಂದ್ರನಿಗೆ ಮಾತ್ರ. ಪ್ರತಿ ಬಿಲ್ ಅನ್ನು ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಮಾತ್ರೆಯೂ ಸಿಗುತ್ತಿಲ್ಲ. ಅದಕ್ಕೂ ಬೆಂಗಳೂರಿಗೆ ಹೋಗಬೇಕಿದೆ. ಒಬ್ಬರೇ ಅಧಿಕಾರವನ್ನು ಹಿಡಿದುಕೊಂಡಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಪರ್ಸೆಂಟೇಜ್‌ಗಾಗಿ ಎಲ್ಲಾ ಅಧಿಕಾರ ಒಂದು ಕಡೆ ಕೇಂದ್ರೀಕೃತವಾಗಿದೆ. ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬಾರದು. ಇದು ಒಳ್ಳೆಯದಲ್ಲ’ ಎಂದು ಹರಿಹಾಯ್ದರು.
‘ಸಮರ್ಥವಾಗಿ ಕೋವಿಡ್ ನಿರ್ವಹಿಸಲುಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಪ್ರತಿ ಜಿಲ್ಲೆಗೆ ನಿಯೋಜಿಸಬೇಕು. ಅವರಿಗೆ ಸಂಪೂರ್ಣ ಅಧಿಕಾರ ನೀಡಿ, ಹಣ ಬಳಸಲು ಅವಕಾಶ ಕೊಡಬೇಕು. ಪ್ರತಿ ಜಿಲ್ಲೆಗೆ ₹ 100 ಕೋಟಿ ಮೀಸಲಿಡಿ. ಅವರ ಕೆಳಗೆ ಜಿಲ್ಲಾಧಿಕಾರಿಗಳು ಕೆಲಸ ಮಾಡಲಿ. ಆಮೇಲೆ ಬೇಕಾದರೆ ಅಧಿಕಾರಿಗಳನ್ನು ಪ್ರಶ್ನಿಸಿ’ ಎಂದು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.