ಶುಕ್ರವಾರ, ಏಪ್ರಿಲ್ 16, 2021
31 °C

ಅಪಾಯದ ಹೆರಿಗೆ: 2 ತಿಂಗಳ ಬಳಿಕ ಮಗು ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪಾಯದ ಹೆರಿಗೆಯಿಂದಾಗಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ ನವಜಾತ ಶಿಶುವಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಎರಡು ತಿಂಗಳ ಬಳಿಕ ಮಗು ಚೇತರಿಸಿಕೊಂಡಿದೆ. 

ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಶ್ರವಣದೋಷ ಸಮಸ್ಯೆ ಎದುರಿಸುತ್ತಿದ್ದರು. ಅವರು ಆಂಧ್ರಪ್ರದೇಶದ ಹಿಂದುಪುರದವರು. ಮಹಿಳೆಯು ಅಲ್ಲಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಾಗ ವೈದ್ಯರು ಹೆರಿಗೆ ವೇಳೆ ಅಪಾಯ ಇರುವುದನ್ನು ಗುರುತಿಸಿ, ಇಲ್ಲಿಗೆ ಶಿಫಾರಸು ಮಾಡಿದರು. 27 ವಾರಗಳ ಗರ್ಭಿಣಿಯಾಗಿದ್ದ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಇದರಿಂದಾಗಿ ವೈದ್ಯರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆದರು ಎಂದು ಆಸ್ಪತ್ರೆ ತಿಳಿಸಿದೆ.

ಮಗು ಜನಿಸಿದಾಗ ಕೇವಲ 980 ಗ್ರಾಂ ತೂಕ ಹೊಂದಿತ್ತು. ಎರಡು ತಿಂಗಳು ಆರೈಕೆ ಮಾಡಲಾಯಿತು. ಆಸ್ಪತ್ರೆ
ಯಿಂದ ಮನೆಗೆ ಕಳುಹಿಸುವಾಗ ಅದರ ತೂಕವು 1.66 ಕೆ.ಜಿಗೆ ಏರಿಕೆಯಾಗಿತ್ತು. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.