ಡ್ರಗ್ಸ್ ಜಾಲ: ಸಿಸಿಬಿ ಪೊಲೀಸರಿಂದ ಪರಿಶೀಲನೆ
ಭಟ್ಕಳ: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿ.ಸಿ.ಬಿ ಪೊಲೀಸರು ಭಟ್ಕಳದ ಸುಲ್ತಾನ್ ಸ್ಟ್ರೀಟ್‍ನ ಮನೆಯೊಂದರ ಮೇಲೆ ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇದೇ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆಗ ಏನೂ ಮಾಹಿತಿ ಸಿಗದೇ ವಾಪಸಾಗಿದ್ದರು. ಹೀಗಾಗಿ ಸಿ.ಸಿ.ಬಿ ಪೊಲೀಸರು ಪುನಃ ಇದೇ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಮೆಸ್ಸಿ ಎಂಬಾತ ಇದೇ ಮನೆಯ ಸದಸ್ಯ ಎಂದು ತಿಳಿದುಬಂದಿದೆ.
ಕಳೆದ ಸೆಪ್ಟೆಂಬರ್‌ನಿಂದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ವಿಚಾರಣೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರ ಮಾಹಿತಿ, ದಾಖಲೆ ಕಲೆ ಹಾಕಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್ ವಿರೂಪಾಕ್ಷ ಅವರ ತಂಡದ ಜೊತೆ ಭಟ್ಕಳ ಸಿ.ಪಿ.ಐ ದಿವಾಕರ್, ಸಬ್ ಇನ್‌ಸ್ಪೆಕ್ಟರ್ ಭರತ್ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.