ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಮಧ್ಯ ಪ್ರವೇಶದಿಂದ ರೆಮ್‌ಡಿಸಿವಿರ್ ಬೆಲೆ ಭಾರಿ ಇಳಿಕೆಯಾಗಿದೆ: ಡಿವಿಎಸ್‌

Last Updated 17 ಏಪ್ರಿಲ್ 2021, 21:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಪೀಡಿತರ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಕೆಯಾಗುವ  ರೆಮ್‌ಡಿಸಿವಿರ್ ಚುಚ್ಚುಮದ್ದು ಬೆಲೆಯು ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಭಾರಿ ಇಳಿಕೆಯಾಗಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಕ್ಯಾಡಿಲಾ ಕಂಪನಿ ರೆಮ್ಡೆಕ್ ಬ್ರ್ಯಾಂಡಿನ ರೆಮ್‌ಡಿಸಿವಿರ್ ದರವನ್ನು ₹2,800ರಿಂದ ₹ 899ಕ್ಕೆ ಇಳಿಸಿದೆ. ಬೇರೆ ಬೇರೆ ಕಂಪನಿಗಳ ವಿವಿಧ ಬ್ರ್ಯಾಂಡಿನ ರೆಮ್‌ಡಿಸಿವಿರ್‌ ದರ ಹೀಗಿದೆ. ಡಾ ರೆಡ್ಡೀಸ್ ಕಂಪನಿಯ ರೆಡಿಕ್ಸ್ ₹2,700 (ಹಿಂದಿನ ದರ ₹ 5,400), ಸಿಂಜಿನ್ (ಬಯೋಕಾನ್) ಕಂಪನಿಯ ರೆಮ್ವಿನ್ ₹ 2,450 (₹ 39,50), ಸಿಪ್ಲಾ ಕಂಪನಿಯ ಸಿಪ್ರೆಮಿ ₹ 3,000 (₹ 4,000), ಮಿಲನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಡೆಸ್ರೆಮ್ ₹ 3,400 (₹ 4,800), ಜ್ಯುಬಿಲೆಂಟ್ ಜೆನರಿಕ್ಸ್ ಕಂಪನಿಯ ಜ್ಯುಬಿ-ಆರ್ ₹ 3,400 (₹ 4,700), ಹೆಥೆರೋ ಹೆಲ್ತ್ಕೇರ್ ಕಂಪನಿಯ ಕೊವಿಫೊರ್ ₹ 3,490 (₹5,400) ಎಂದು ಅವರು ವಿವರಿಸಿದ್ದಾರೆ.

ಉತ್ಪಾದನೆ ಹೆಚ್ಚಳ: ‘ಅಮೆರಿಕದ ಗಿಲೀಡ್ ಸೈನ್ಸಸ್‌ ಕಂಪನಿ ಈ ಚುಚ್ಚು
ಮದ್ದಿನ ಪೇಟೆಂಟ್ ಹೊಂದಿದ್ದು, ಭಾರತದ ಏಳು ಫಾರ್ಮಾ ಕಂಪನಿಗಳು ಉತ್ಪಾದನಾ ಪರವಾನಗಿ ಪಡೆದಿವೆ. ಅವುಗಳ ಈಗಿನ ತಿಂಗಳ ಉತ್ಪಾದನಾ ಸಾಮರ್ಥ್ಯ 38.8 ಲಕ್ಷ ವೈಯಲ್ಸ್ (ಬಾಟಲಿ)ಯಷ್ಟಿದೆ. ಹೆಚ್ಚುವರಿಯಾಗಿ 35.3 ಲಕ್ಷ ವೈಯಲ್ಸ್ ಉತ್ಪಾದಿಸಲು ಅನುಮತಿ ನೀಡಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT