ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ್ಯುವರ್ಸ್‌’ ನಾಳೆ ಆರಂಭ: ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

Last Updated 1 ಜುಲೈ 2022, 4:18 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಜ್ಞಾನ ದೇಗುಲ–2022 ಜುಲೈ 2 ಮತ್ತು 3ರಂದು ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಆವರಣದಲ್ಲಿ ನಡೆಯಲಿದೆ.

ಇದು 12ನೇ ಆವೃತ್ತಿಯಾಗಿದೆ.ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಅಂತಃಶಕ್ತಿಯ ಬಲವರ್ಧನೆಗಾಗಿ ಉತ್ತಮ ಮಾರ್ಗದರ್ಶನ ಒದಗಿಸುವುದು ಈ ಶೈಕ್ಷಣಿಕ ಮೇಳದಉದ್ದೇಶವಾಗಿದೆ.

40ಕ್ಕೂ ಹೆಚ್ಚು ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳುಈ ಮೇಳದಲ್ಲಿ ಭಾಗಿಯಾಗಲಿದ್ದು, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸ್‌ಗಳು, ಅವಕಾಶಗಳ ಬಗ್ಗೆ ಮಾಹಿತಿ ಸಿಗಲಿದೆ. ಸಿಇಟಿ, ನೀಟ್, ಕಾಮೆಡ್–ಕೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನೇರ ಸಂವಹನದ ಅವಕಾಶ ದೊರೆಯಲಿದೆ.ಇದೆಲ್ಲವೂ ಒಂದೇ ವೇದಿಕೆಯಲ್ಲಿ ಮತ್ತು ಸಂಪೂರ್ಣ ಉಚಿತವಾಗಿದೆ.

ವೈದ್ಯಕೀಯ, ದಂತ, ನೀಟ್‌ ಮತ್ತು ಕಾಮೆಡ್‌–ಕೆ ಕುರಿತು ವೃತ್ತಿ ಮಾರ್ಗದರ್ಶನ ದೊರೆಯಲಿದೆ. ಬೆಳಿಗ್ಗೆ 10ಕ್ಕೆ ಕಾಮೆಡ್‌–ಕೆ, 11ಕ್ಕೆ ಸಿಇಟಿ ಹಾಗೂ ಮಧ್ಯಾಹ್ನ 12ಕ್ಕೆ ನೀಟ್‌ ಕುರಿತು ಕಾರ್ಯಾಗಾರಗಳು ನಡೆಯಲಿವೆ.

ಜುಲೈ 2ರಂದು ಬೆಳಿಗ್ಗೆ 10ಕ್ಕೆ ವಿವಿಧ ವಿಷಯಗಳ ಬಗ್ಗೆ ಡಾ. ಅಲಿ ಖ್ವಾಜಾ, 11 ಗಂಟೆಗೆ ಕಾಮೆಡ್‌ನಲ್ಲಿನ ಕೌನ್ಸೆಲಿಂಗ್‌ ಕುರಿತು ಶಾಂತಾರಾಮ್‌ ನಾಯಕ್‌ ಹಾಗೂ ಮಧ್ಯಾಹ್ನ 12ಕ್ಕೆ ಸಿಇಟಿ ಮತ್ತು ನೀಟ್‌ ಬಗ್ಗೆ ಎ.ಎಸ್‌. ರವಿ ಹಾಗೂ ಶ್ರೀನಿವಾಸ ಮೂರ್ತಿ ಡಿ.ವಿ. ಅವರುಮಾತನಾಡಲಿದ್ದಾರೆ.

ಜುಲೈ 3ರಂದು ಬೆಳಿಗ್ಗೆ 10.30ಕ್ಕೆ ಕಾಮೆಡ್‌–ಕೆ ಶಾಂತರಾಮ್‌ ನಾಯಕ್‌ ಅವರು ಹಾಗೂ ಮಧ್ಯಾಹ್ನ 12ಕ್ಕೆ ಸಿಇಟಿ ಮತ್ತು ನೀಟ್‌ ಬಗ್ಗೆ ತಜ್ಞರು ಉಪನ್ಯಾಸ ನೀಡಲಿದ್ದಾರೆ.

ಜುಲೈ 9 ಮತ್ತು 10ರಂದು ಹುಬ್ಬಳ್ಳಿಯಗೋಕುಲ ಗಾರ್ಡನ್ಸ್‌ನಲ್ಲಿ|‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ ನಡೆಯಲಿದೆ.

ವಿವರಗಳಿಗಾಗಿ www.eduverseevents.com ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT