ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗನವಾಡಿಗೆ ಅವಧಿ ಮೀರಿದ ಆಹಾರ ಪದಾರ್ಥ ಪೂರೈಕೆ?

Last Updated 4 ಡಿಸೆಂಬರ್ 2022, 0:58 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಹೆಸರಿನಲ್ಲಿ ಬಳಕಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಪೂರೈಸಿದೆಯೇ? ಹೌದು ಎನ್ನುತ್ತಿವೆ ತುಮಕೂರು ಜಿಲ್ಲೆಯ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಆಹಾರದ ಪಟ್ಟಣಗಳ ಮೇಲೆ ನಮೂದಾಗಿರುವ ದಿನಾಂಕಗಳು.

ತಿಪಟೂರು, ತುಮಕೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ತೊಗರಿ ಬೇಳೆ, ಹೆಸರು ಕಾಳು ಮತ್ತುಮಿಶ್ರಿತ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕವನ್ನು 2022ರ ನವೆಂಬರ್‌ ಎಂದು ಅಚ್ಚು ಹಾಕಲಾಗಿದೆ. ಉಪಯೋಗಿಸಬಹುದಾದ ಕೊನೆಯ ದಿನಾಂಕವನ್ನು 2022 ಜನವರಿ 31 ಎಂದು ಮುದ್ರಿಸಲಾಗಿದೆ.

ಈ ಪೊಟ್ಟಣಗಳ ಚಿತ್ರಗಳು ಅಂಗನವಾಡಿ ನೌಕರರ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಹರಿದಾಡುತ್ತಿವೆ. ಇವಗಳ ಜತೆ ಸಂದೇಶವೊಂದು ರವಾನೆಯಾಗುತ್ತಿದ್ದು, ‘ಈ ತಿಂಗಳು ಸರಬರಾಜಾಗಿರುವ ಆಹಾರ ದಸ್ತಾನಿನಲ್ಲಿ ಉಪಯೋಗಿಸುವ ಕೊನೆಯ ದಿನಾಂಕದಲ್ಲಿ 2023 ಬದಲು 2022 ಎಂದು ನಮೂದಾಗಿದೆ. ತಕ್ಷಣವೇ ಅದನ್ನು ಪೆನ್ನಿನಲ್ಲಿ ತಿದ್ದುವುದು’ ಎಂದು ತಿಳಿಸಲಾಗಿದೆ.

‘2023ರ ಬದಲು 2022 ಎಂದು ಅಚ್ಚಾಗಿದ್ದರೆ ಈ ಕುರಿತು ಸ್ಪಷ್ಟನೆಯನ್ನಾದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಬೇಕಿತ್ತು. ಅದ್ಯಾವನ್ನೂ ಮಾಡದೆ ಇಲಾಖೆ ಮೌನ ವಹಿಸಿದರೆ ಯಾರು ಜವಾಬ್ದಾರರು. ಬಳಕೆಗೆ ಯೋಗ್ಯವಲ್ಲದ ಆಹಾರ ಸೇವಿಸಿ ಮಹಿಳೆ ಅಥವಾ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ’ ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಪ್ರಶ್ನಿಸಿದರು.

***

ಏನಾಗಿದೆ ಎಂಬುದರ ಕುರಿತು ಪರಿಶೀಲನೆ ಮಾಡಿಸುತ್ತೇನೆ. ತನಿಖೆ ನಡೆಸಿ ವರದಿ ನೀಡಲು ಇಲಾಖೆಯ ಕಾರ್ಯದರ್ಶಿಗೆ ಸೂಚಿಸುತ್ತೇನೆ

- ಹಾಲಪ್ಪ ಆಚಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT