ಶುಕ್ರವಾರ, ಅಕ್ಟೋಬರ್ 22, 2021
21 °C
ಮಕ್ಕಳ ಕಣ್ಣಲ್ಲಿ ಕಾರಂತರು

ಇದೇ ಅ. 8ಕ್ಕೆ ‘ಗ್ರೋಯಿಂಗ್‌ ಅಪ್‌ ಕಾರಂತ’ ಕೃತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಡಲ ತೀರದ ಭಾರ್ಗವ’ ಎಂದೇ ಪರಿಚಿತರಾದ ಡಾ.ಕೆ. ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಕುರಿತು ಅವರ ಮಕ್ಕಳು ಬರೆದಿರುವ ‘ಗ್ರೋಯಿಂಗ್‌ ಅಪ್‌ ಕಾರಂತ’ ಕೃತಿಗೆ ಸಂಬಂಧಿಸಿದಂತೆ ಅಕ್ಟೋಬರ್ 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಿವರಾಮ ಕಾರಂತ ಅವರ ಮಕ್ಕಳಾದ ಪರಿಸರ ತಜ್ಞ ಉಲ್ಲಾಸ ಕಾರಂತ, ಮಾಳವಿಕಾ ಕಪೂರ್ ಹಾಗೂ ಕ್ಷಮಾ ರಾವ್‌ ಅವರು ಈ ಕೃತಿ ರಚಿಸಿದ್ದಾರೆ. ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಅಕ್ಟೋಬರ್‌ 8ರಂದು ಸಂಜೆ 6ಕ್ಕೆ ಈ ಪುಸ್ತಕಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪುಸ್ತಕ ಬಿಡುಗಡೆಯೂ ನಡೆಯಲಿದೆ. ಈ ಕಾರ್ಯಕ್ರಮವನ್ನು https://bangaloreinternationalcentre.org/event/growing-up-karanth/ ಮೂಲಕವೂ ವೀಕ್ಷಿಸಬಹುದಾಗಿದೆ. ಪುಸ್ತಕವು ಇದೇ ಸ್ಥಳದಲ್ಲೇ ಅಂದು ಮಾರಾಟಕ್ಕೆ ಲಭ್ಯವಿದೆ.

‘ನಾವು ಮೂವರು ನಮ್ಮ ತಂದೆ ಶಿವರಾಮ ಕಾರಂತ ಅವರ ವೈಯಕ್ತಿಕ ಜೀವನ ಚರಿತ್ರೆಯನ್ನು ಬರೆದಿದ್ದೇವೆ. ನಮ್ಮ ತಂದೆ ಮತ್ತು ತಾಯಿ ಲೀಲಾ ಕಾರಂತ ಅವರ ಜತೆಗಿನ ನಮ್ಮ ಅನುಭವಗಳನ್ನು ಅನಾವರಣಗೊಳಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಈ ಪುಸ್ತಕವನ್ನು ವೆಸ್ಟ್‌ಲ್ಯಾಂಡ್‌ ಪ್ರಕಾಶನ (ಅಮೆಜಾನ್‌ನ ಭಾರತದ ಪ್ರಕಾಶನ ವಿಭಾಗ) ಪ್ರಕಟಿಸಿದೆ. ಶೀಘ್ರದಲ್ಲೇ ಈ ಪುಸ್ತಕವು ಆನ್‌ಲೈನ್‌ ಮೂಲಕ ಮತ್ತು ಪುಸ್ತಕದ ಅಂಗಡಿಗಳಲ್ಲಿ ಲಭ್ಯವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.