ಶನಿವಾರ, ಜುಲೈ 24, 2021
20 °C

ಕೋವಿಡ್: 27 ಜಿಲ್ಲೆಗಳ ಕೋವಿಡ್ ಸೋಂಕಿತರ ಸಂಖ್ಯೆ 500ರ ಗಡಿಯೊಳಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 5,815 ಮಂದಿ ಕೋವಿಡ್ ಪೀಡಿತರಾಗಿರುವುದು ಶನಿವಾರ ದೃಢಪಟ್ಟಿದೆ. 27 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ರ ಗಡಿಯೊಳಗೆ ವರದಿಯಾಗಿದ್ದು, ಸೋಂಕು ದೃಢ ಪ್ರಮಾಣವು ಶೇ 3.78ಕ್ಕೆ ಇಳಿಕೆಯಾಗಿದೆ.

9 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿದ ಹೊಸ ತಳಿಯ ವೈರಾಣುಗಳು ರಾಜ್ಯದಲ್ಲಿ ಕೂಡ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಅಮೆರಿಕಾ ಮೂಲಕ ಆಲ್ಫಾ/ಬಿ.1.1.7 ವೈರಾಣು ಈವರೆಗೆ 127 ಮಂದಿಯಲ್ಲಿ ಪತ್ತೆಯಾಗಿದೆ. ಅದೇ ರೀತಿ, ದಕ್ಷಿಣ ಆಫ್ರಿಕಾ ಮೂಲದ ಬೀಟಾ/ಬಿ.1.351 ವೈರಾಣು ಆರು ಮಂದಿಯಲ್ಲಿ, ನಮ್ಮ ದೇಶದ ಡೆಲ್ಟಾ/ಬಿ.1.617.2 ವೈರಾಣು 318 ಮಂದಿಯಲ್ಲಿ ಹಾಗೂ ಕಪ್ಪಾ/ಬಿ.1.617.1 ವೈರಾಣು 112 ಮಂದಿಯಲ್ಲಿ ಕಾಣಿಸಿಕೊಂಡಿರುವುದು ಜಿನೋಮಿಕ್ ಸಿಕ್ವೆನ್ಸೀಸ್‌ ಪರೀಕ್ಷೆಯಿಂದ ದೃಢಪಟ್ಟಿದೆ.

ಈ ತಿಂಗಳು 19 ದಿನಗಳಲ್ಲಿ 1.97 ಲಕ್ಷ ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು