ಭಾನುವಾರ, ಮಾರ್ಚ್ 7, 2021
32 °C

ಗಂಟಲಿಗೆ ಗಾಯ: ಚಿರತೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ಸಮೀಪದ ಕಡವಿಗೆರೆ ಅರಣ್ಯ ಪ್ರದೇಶದಲ್ಲಿ ಗಂಟಲಿಗೆ ಗಾಯ ಮಾಡಿಕೊಂಡು ಆಹಾರ ಸೇವಿಸದೆ ನಿತ್ರಾಣಗೊಂಡು ಚಿರತೆಯೊಂದು ಭಾನುವಾರ ಮೃತಪಟ್ಟಿದೆ.

ಈ ಕುರಿತು ಮಾಹಿತಿ ನೀಡಿದ ಅರಣ್ಯಾಧಿಕಾರಿ ಸುಜಾತಾ, ‘ಚಿರತೆ ಸುಮಾರು ಒಂದೂವರೆ ವರ್ಷದ್ದಾಗಿದೆ. ಕಾಡಿನಲ್ಲಿ ಒಣಗಿದ ಮರದ ಕಟ್ಟಿಗೆಯಿಂದ ಗಂಟಲಿಗೆ ಗಾಯಮಾಡಿಕೊಂಡಿರುವ ಸಾಧ್ಯತೆ ಇದೆ. ನೋವಿನಿಂದ ಆಹಾರ ಸೇವಿಸಲಾಗದೆ ನಿತ್ರಾಣಗೊಂಡು ಮೃತಪಟ್ಟಿದೆ. ಸಿಬ್ಬಂದಿ ಚಿರತೆ ಮಲಗಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಚಿರತೆ ಸೆರೆಗೆ ಬಲೆ ಬೀಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

ಚಿರತೆಯ ಶವವನ್ನು ಹೊಸದುರ್ಗಕ್ಕೆ ತೆಗೆದುಕೊಂಡು ಹೋಗಿ ಅಂತಿಮ ವಿಧಿ ನೆರವೇರಿಸಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲಕಂಠಪ್ಪ, ಉಪ ವಲಯ ಅರಣ್ಯಾಧಿಕಾರಿ ಯೋಗೇಶ್, ವನಪಾಲಕ ಹರೀಶ್ ಹಾಗೂ ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು