ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ಗ್ರಾಮ ಪಂಚಾಯಿತಿ ಚುನಾವಣೆ: ಶಾಂತಿಯುತವಾಗಿ ನಡೆದ 2ನೇ ಹಂತದ ಮತದಾನ
LIVE

ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆದ ಎರಡನೇ ಹಂತದ ಮತದಾನ ಶಾಂತಯುತವಾಗಿ ಮುಕ್ತಾಯವಾಗಿದೆ. ಮೊದಲನೇ ಹಂತದ ಮತದಾನ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳಿಗೆ ಇದೇ 22ರಂದು ನಡೆದಿತ್ತು. ಇದೀಗ ಎರಡನೇ ಹಂತದಲ್ಲಿ 109 ತಾಲ್ಲೂಕುಗಳ 2,709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಇಂದು ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಉಪ್ಪಿನಂಗಡಿಯಲ್ಲಿ 106 ವರ್ಷದ ವೃದ್ಧೆ ಮತದಾನ, ವಿಜಯಪುರದಲ್ಲಿ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ ಕೋವಿಡ್ ಸೋಂಕಿತರು, ಕಲಬುರ್ಗಿಯಲ್ಲಿ ಅಭ್ಯರ್ಥಿಗೆ ಹೆಣ್ಣು ಮಗು ಜನನ ಇವು ಚುನಾವಣೆಯ ಕೆಲ ಘಟನೆಗಳಾಗಿವೆ.
Last Updated 27 ಡಿಸೆಂಬರ್ 2020, 15:20 IST
ಅಕ್ಷರ ಗಾತ್ರ
14:4327 Dec 2020

ವಿಜಯಪುರ: ಶೇ 69.75ರಷ್ಟು ಮತದಾನ

14:3827 Dec 2020

ರಾಮನಗರ: ಶೇ 88.26 ರಷ್ಟು ಮತದಾನ

ರಾಮನಗರ: ಜಿಲ್ಲೆಯ‌‌ ಮಾಗಡಿ ಹಾಗು ಚನ್ನಪಟ್ಟಣ ತಾಲ್ಲೂಕುಗಳ 62  ಗ್ರಾ.ಪಂ.ಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 88.26ರಷ್ಟು ಮತದಾನ ನಡೆದಿದೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ 89.99 ಮಂದಿ ಮತ ಚಲಾಯಿಸಿದರೆ, ಮಾಗಡಿ ತಾಲ್ಲೂಕಿನಲ್ಲಿ ಶೇ 86.54 ಮತದಾರರು ಮತದಾನ ಮಾಡಿದ್ದಾರೆ.

14:0827 Dec 2020

ಕೊಪ್ಪಳ: ಶೇ 81.99ರಷ್ಟು ಮತದಾನ

ಕೊಪ್ಪಳ: ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗರಿ ತಾಲ್ಲೂಕುಗಳಲ್ಲಿ ಸಂಜೆ 5ಕ್ಕೆ ಕೊನೆಗೊಂಡ ಮತದಾನದಲ್ಲಿ ಶೇ 81.99ರಷ್ಟು ಮತದಾನವಾಗಿದೆ.

ಯಾವುದೇ ಕೋವಿಡ್‌ ರೋಗಿಗಳು ಮತ ಚಲಾಯಿಸಿಲ್ಲ. ಬಹುತೇಕ ಸುಗಮ, ಶಾಂತಿಯುತ ಚುನಾವಣೆ ನಡೆಯಿತು.

ತಾಲ್ಲೂಕು   ಪಂಚಾಯಿತಿ  ಮತದಾನ ವಿವರ (ಶೇ)

ಕುಷ್ಟಗಿ      36           81.05

ಗಂಗಾವತಿ   18           81.82

ಕಾರಟಗಿ     11           81.65

ಕನಕಗಿರಿ     11           86.8

ಒಟ್ಟು         76           81.99

13:5227 Dec 2020

ರಾಯಚೂರು ಗ್ರಾಪಂ ಚುನಾವಣೆ: ಶೇ 77.11 ಮತದಾನ

ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೂ ಶೇ 77.11 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 76.82, ಸಿಂಧನೂರು ತಾಲ್ಲೂಕಿನಲ್ಲಿ ಶೇ 78.62 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 74.61 ರಷ್ಟು ಮತದಾನವಾಗಿದೆ

13:4927 Dec 2020

ಹಳೆ ವೈಷಮ್ಯ; ಜಿ.ಪಂ.ಸದಸ್ಯನ ಮೇಲೆ ಹಲ್ಲೆ

13:3027 Dec 2020

ಮತಚಲಾಯಿಸಿ ಮೃತಪಟ್ಟ ವೃದ್ಧೆ

ಚಿತ್ರದುರ್ಗ: ಮತಚಲಾಯಿಸಿದ ಬಳಿಕ ನಿತ್ರಾಣಗೊಂಡ ವೃದ್ಧೆಯೊಬ್ಬರು ಮತಗಟ್ಟೆ ಹೊರಗೆ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಬಿರೇನಹಳ್ಳಿಯಲ್ಲಿಯಲ್ಲಿ ಭಾನುವಾರ ನಡೆದಿದೆ.
ಶಿವಪುರದ ಸರೋಜಮ್ಮ (90) ಮೃತಪಟ್ಟವರು. ಬಿರೇನಹಳ್ಳಿ ಮತಗಟ್ಟೆಗೆ ಬಂದಿದ್ದ ಅವರು ಹಕ್ಕು ಚಲಾವಣೆ ಮಾಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

11:5727 Dec 2020

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ 2ನೇ ವಾರ್ಡ್‌ನಲ್ಲಿ ಶ್ರೀಶೈಲ ಪೀಠ ಹಾಗೂ ಯಡೂರದ ಕಾಡಸಿದ್ದೇಶ್ಬರ ಮಠದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ ಚಲಾಯಿಸಿದರು.

11:5127 Dec 2020

ಗಾಡಿ ಏರಿ ಬಂದು ಮತದಾನ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಮತಗಟ್ಟೆಗೆ ಕೆಲವರು ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿದರು.

11:4727 Dec 2020

ಪಿಪಿಇ ಕಿಟ್‌ ಧರಿಸಿ ಮತದಾನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವೂರ ಬೂತ್‌ನಲ್ಲಿ ಕೋವಿಡ್  ಪಾಸಿಟಿವ್ ಮತದಾರರು ಪಿಪಿ ಕಿಟ್ ಧರಿಸಿ, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.

10:5627 Dec 2020

ಬಳ್ಳಾರಿ: 3 ಗಂಟೆಯ ವೇಳೆಗೆ ಶೇ 64.32 ಮತದಾನ

ಬಳ್ಳಾರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 64.32 ರಷ್ಟು ಮತದಾನವಾಗಿದೆ