ಮಸ್ಕಿ (ರಾಯಚೂರು ಜಿಲ್ಲೆ): ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ತಕರಾರು ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಇದರಿಂದಾಗಿ ಉಪಚುನಾವಣೆಯ ದಾರಿ ಸುಗಮವಾದಂತಾಗಿದೆ.

2018ರ ಚುನಾವಣೆಯಲ್ಲಿ 213 ಮತಗಳ ಅಂತರದಿಂದ ಪ್ರತಾಪಗೌಡ ಪಾಟೀಲ ಜಯಗಳಿಸಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದಆರ್. ಬಸನಗೌಡ ಅವರು, ‘ಅಕ್ರಮ ಮತದಾನದಿಂದ ಪ್ರತಾಪಗೌಡ ಪಾಟೀಲ ಗೆಲವು ಸಾಧಿಸಿದ್ದಾರೆ. ಅವರ ಆಯ್ಕೆ ಅಸಿಂಧುಗೊಳಿಸಬೇಕು’ ಎಂದುಪ್ರಕರಣ ದಾಖಲಿಸಿದ್ದರು.

ಸತತ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರು, ದಾಖಲೆಗಳ ಕೊರತೆ ಎಂಬ ಕಾರಣಕ್ಕೆ ಆರ್. ಬಸನಗೌಡ ಸೇರಿದಂತೆ ಇತರರು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ವಜಾಗೊಳಿಸಿದರು.

ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟ ವೇಳೆ ಈ ಕ್ಷೇತ್ರದ ಪ್ರತಾಪಗೌಡ ಕೂಡ ರಾಜೀನಾಮೆ ಕೊಟ್ಟಿದ್ದರು. ತಕರಾರು ಅರ್ಜಿ ಕೋರ್ಟ್ ಮುಂದೆ ಇದ್ದುದರಿಂದ ಉಪಚುನಾವಣೆ ನಡೆದಿರಲಿಲ್ಲ. ಈಗ ಅವುಗಳೆಲ್ಲ ವಜಾಗೊಂಡಿದ್ದರಿಂದ ಉಪಚುನಾವಣೆ ದಾರಿ ಸುಗಮವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.