ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತನ್ನೇ ಬದಲಿಸಲಿದೆ ನ್ಯಾನೋ ತಂತ್ರಜ್ಞಾನ: ಪ್ರೊ.ಎಸ್.ಎಂ.ಶಿವಪ್ರಸಾದ

3 ದಿನಗಳ ‘ವಿಜ್ಞಾನ ವಿಸ್ತೃತ’ ಕಾರ್ಯಕ್ರಮಕ್ಕೆ ಚಾಲನೆ
Last Updated 19 ಜನವರಿ 2023, 22:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಹೊಸದನ್ನು ಅಳವಡಿಸಿಕೊಳ್ಳದಿದ್ದರೆ ಭಾರತ ವಿಶ್ವ ಗುರು ಆಗಲು ಸಾಧ್ಯವಿಲ್ಲ. ನ್ಯಾನೋ ತಂತ್ರಜ್ಞಾನ ಇಡೀ ಜಗತ್ತನ್ನೇ ಬದಲಾಯಿಸಲಿದೆ. ಮಕ್ಕಳು ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡಬೇಕು, ಸಂಶೋಧನೆಗೆ ಮುಂದಾಗಬೇಕು’ ಎಂದು ರಾಜ್ಯ ಉನ್ನತ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಎಂ.ಶಿವಪ್ರಸಾದ ಹೇಳಿದರು.

ಪಟ್ಟಣದ ಸ್ಕೂಲ್ ಚಂದನ ಹಾಗೂ ಪ್ರೊ.ಸಿ.ಎನ್‍.ಆರ್.ರಾವ್ ಎಜುಕೇಷನ್‌ ಫೌಂಡೇಷನ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ‘ವಿಜ್ಞಾನ ವಿಸ್ತೃತ’ ಕಾರ್ಯಕ್ರಮ ಗುರುವಾರ ಆರಂಭಗೊಂಡಿದ್ದು, ಪ್ರೊ. ಸಿ.ಎನ್‍.ಆರ್.ರಾವ್ ಮತ್ತು ಇಂದುಮತಿ ರಾವ್ ಅವರು ಬೆಂಗಳೂರಿನಿಂದ ವರ್ಚುವಲ್‌ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸ್ಕೂಲ್ ಚಂದನದ ಸ್ಥಾಪಕ ಅಧ್ಯಕ್ಷ ಟಿ.ಈಶ್ವರ ಮಾತನಾಡಿ, ‘ಹಳ್ಳಿಗಳಲ್ಲಿ ವಿಜ್ಞಾನಿಗಳು ರೂಪುಗೊಳ್ಳಬೇಕು ಎಂಬ ಕಾರಣಕ್ಕಾಗಿ ಪ್ರೊ.ರಾವ್ ಅವರು ನಮ್ಮ ಶಾಲೆಯಲ್ಲಿ ವಿಜ್ಞಾನ ಕೇಂದ್ರ ಆರಂಭಿಸಿದ್ದಾರೆ. ಮಕ್ಕಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಭರವಸೆ ಇದೆ’ ಎಂದು ಹೇಳಿದರು.

ಕಾರ್ಯಕ್ರಮ ವೀಕ್ಷಣೆಗೆ ಗದಗ, ಹಾವೇರಿ, ಧಾರವಾಡ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಶಾಲೆಗಳ ಮಕ್ಕಳು ಬಂದಿದ್ದರು. ಹೊರ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

*

ಲಕ್ಷ್ಮೇಶ್ವರದಂತಹ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಬೆಳೆಸುವ ಉದ್ದೇಶದಿಂದ ಸ್ಕೂಲ್ ಚಂದನದಲ್ಲಿ ವಿಜ್ಞಾನ ಕೇಂದ್ರ ಆರಂಭಿಸಿದ್ದು, ಮಕ್ಕಳು ಇದರ ಸದುಪಯೋಗ ಪಡೆಯಬೇಕು.
–ಪ್ರೊ. ಸಿ.ಎನ್‌.ಆರ್.ರಾವ್, ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT