ಶುಕ್ರವಾರ, ಜೂನ್ 25, 2021
21 °C

ಕಂದಕಕ್ಕೆ ಬಿದ್ದ ಕಾಡಾನೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಸಮೀಪದ ಕರಡಿಗೋಡು ಗ್ರಾಮದಲ್ಲಿ, ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

ಬೆಳಗಿನ ಜಾವ, ಗ್ರಾಮದ ಫಾಯಿಸ್ ಎಂಬುವವರ ಕಾಫಿ ತೋಟದ ಅಂಚಿನಲ್ಲಿ ಇರುವ ಕಂದಕಕ್ಕೆ ಅಂದಾಜು 24 ವರ್ಷದ ಸಲಗವೊಂದು ಬಿದ್ದಿದೆ. ಅದು ಕಂದಕದಿಂದ ಹೊರಬರಲು ಯತ್ನಿಸಿದ್ದು, ಕಾಡಾನೆ ಘೀಳಿಡುವ ಶಬ್ದ ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ವಲಯ ಅರಣ್ಯ ಅಧಿಕಾರಿ ಕಳ್ಳೀಯ ದೇವಯ್ಯ ನೇತೃತ್ವದ ತಂಡ ಸ್ಥಳಕ್ಕಾಗಮಿಸಿದೆ. ಬಳಿಕ, ಜೆ.ಸಿ.ಬಿ ಯ ಸಹಾಯದಿಂದ ಕಾಡಾನೆಯನ್ನು ರಕ್ಷಿಸಿ, ಅರಣ್ಯಕ್ಕೆ ಅಟ್ಟಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.