ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಮಗ್ಗ ಮಂಡಳಿ ರದ್ದು ವಿರೋಧಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

Last Updated 19 ಆಗಸ್ಟ್ 2020, 21:50 IST
ಅಕ್ಷರ ಗಾತ್ರ

ಬೆಂಗಳೂರು: ‘ಅಖಿಲ ಭಾರತ ಕೈಮಗ್ಗ ಮಂಡಳಿ ಮತ್ತು ಅಖಿಲ ಭಾರತ ಕರಕುಶಲ ಮಂಡಳಿ ರದ್ದುಪಡಿಸುವ ಕೇಂದ್ರ ಜವಳಿ ಸಚಿವಾಲಯದ ತೀರ್ಮಾನವನ್ನು ವಾಪಸು ಪಡೆಯಬೇಕು’ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಕೇಂದ್ರದ ಈ ತೀರ್ಮಾನ ನೇಕಾರ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ನಾಲ್ಕನೇ ಕೈಮಗ್ಗ ಗಣತಿ ಪ್ರಕಾರ ದೇಶದಲ್ಲಿ 31.45 ಲಕ್ಷ ಕುಟುಂಬಗಳು ಕೈ ಮಗ್ಗವನ್ನು ಅವಲಂಬಿಸಿವೆ. 2020–21ರ ಆಯವ್ಯಯದಲ್ಲಿ ಈ ಎರಡೂ ಮಂಡಳಿಗಳಿಗೆ ₹485 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಈ ಮಂಡಳಿಗಳನ್ನು ಮುಚ್ಚುವ ನಿರ್ಧಾರ ಕೈಮಗ್ಗವನ್ನೇ ನಂಬಿದ ಲಕ್ಷಾಂತರ ಕುಟುಂಬಗಳಿಗೆ ಮಾರಕವಾಗಲಿದೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘21 ಲಕ್ಷಕ್ಕೂ ಹೆಚ್ಚು ಎಸ್‌.ಸಿ, ಎಸ್‌.ಟಿ ಹಾಗೂ ಇತರ ಹಿಂದುಳಿದ ಕುಟುಂಬಗಳು ಕೈಮಗ್ಗ ವಲಯವನ್ನು ಆಶ್ರಯಿಸಿವೆ. ಈ ಮಂಡಳಿಗಳನ್ನು ಬಲಪಡಿಸುವ ಮೂಲಕ ಕೇಂದ್ರ ಸರ್ಕಾರ, ಈ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಎಲ್ಲ ಕಾರಣಗಳಿಗೆ ಎರಡೂ ಮಂಡಳಿಗಳನ್ನು ರದ್ದುಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT