ಬುಧವಾರ, ಜನವರಿ 20, 2021
21 °C

35 ಸಾವಿರ ದೇವಾಲಯ ಮರು ನಿರ್ಮಾಣವಾಗಲಿ: ಎಸ್‌.ಎಲ್‌.ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶದಲ್ಲಿ ಸುಮಾರು 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ. ಅವುಗಳನ್ನು ಮರುನಿರ್ಮಾಣ ಮಾಡಿ ಮೂಲ ವಾರಸು ದಾರರಿಗೆ ಒಪ್ಪಿಸುವಂತಹ ಕಾನೂನನ್ನು ಪಾರ್ಲಿಮೆಂಟ್‌ ರೂಪಿಸಲಿ’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಆಗ್ರಹಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೂ ಧರ್ಮದ ದೇವರು ಮತ್ತು ಬೇರೆ ಧರ್ಮದ ದೇವರನ್ನು ಹೋಲಿಸಿದಾಗ ಬೇರೆ ಧರ್ಮದವರ ದೇವರು ಮಹಾ ಕೋಪಿಷ್ಠ ಎಂಬುದು ತಿಳಿಯುತ್ತದೆ. ಬೇರೆ ಧರ್ಮದ ದೇವರನ್ನು ಒಂದೇ ಒಂದು ಮಾತಿನಿಂದ ಟೀಕೆ ಮಾಡಿದರೆ ನಿಮ್ಮ ಕತೆ ಮುಗಿದಂತೆ. ಆದರೆ, ನಮ್ಮ ದೇಶದಲ್ಲಿ ನಾವು ದೇವರನ್ನೂ ಟೀಕೆ ಮಾಡುತ್ತೇವೆ. ಅವನು ಮಾಡಿದ್ದು ಸರಿಯೋ, ತಪ್ಪೋ ಎಂದು ಆಲೋಚನೆ ಮಾಡುತ್ತೇವೆ’ ಎಂದು ಅವರು ಹೇಳಿದರು.

ಪಂಜಾಬಿಗಳಿಂದ ಮಾತ್ರ ವಿರೋಧ: ‘ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನವದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಪಂಜಾಬಿಗಳು ಮಾತ್ರ. ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ’ ಎಂದು
ಎಸ್‌.ಎಲ್‌.ಭೈರಪ್ಪ ಅವರು ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು