ಸೋಮವಾರ, ನವೆಂಬರ್ 30, 2020
24 °C

ಇದೇ 17ರಿಂದ ಶಿಕ್ಷಕರ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ 17ರಿಂದ ಪ್ರಕ್ರಿಯೆ ಆರಂಭವಾಗಲಿದೆ.

ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ಹುದ್ದೆಯಡಿ ವರ್ಗಾವಣೆಯಾದವರಿಗೆ ಈ ಬಾರಿ ಮೊದಲ ಆದ್ಯತೆ ಸಿಗಲಿದೆ.

ವರ್ಗಾವಣೆಗೆ ‘ಶಿಕ್ಷಕ ಮಿತ್ರ’ ಆ್ಯಪ್‌ನಲ್ಲಿ ನ. 30ರವರೆಗೆ ಅರ್ಜಿ ಸಲ್ಲಿಸಬಹುದು. ಡಿ. 1ರಿಂದ 11ರವರೆಗೆ ಪರಿಶೀಲನೆ, 15ರಂದು ಅರ್ಹ, ಅನರ್ಹರ ಪಟ್ಟಿ ಪ್ರಕಟಣೆ, 16ರಿಂದ 23ರವರೆಗೆ ಆಕ್ಷೇಪಣೆಗೆ ಅವಕಾಶ, 24ರಿಂದ 29ರವರೆಗೆ ಅನರ್ಹರಿಗೆ ಹೇಳಿಕೆ ನೀಡಲು ಅವಕಾಶ, ಡಿ. 31ರಂದು ಅರ್ಹರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮೊದಲು ಜಿಲ್ಲೆಯ ಒಳಗೆ, ಬಳಿಕ ಜಿಲ್ಲೆಯ ಹೊರಗೆ ವಿಭಾಗದ ಒಳಗೆ, ನಂತರ ವಿಭಾಗದ ಹೊರಗಿನ ಅರ್ಜಿಗಳ ಕೌನ್ಸೆಲಿಂಗ್‌ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು