ಸೋಮವಾರ, ಜೂನ್ 21, 2021
30 °C

ಗಾಯಕ್ವಾಡ್ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದ ಸಾಹಿತ್ಯಕ್ಕೆ ನೀಡುವ 2019ನೇ ಸಾಲಿನ ಪ್ರಶಸ್ತಿಗೆ ವಿಠಲರಾವ್ ಟಿ. ಗಾಯಕ್ವಾಡ್ ಅವರು ಅನುವಾದಿಸಿರುವ ‘ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ’ ಕೃತಿ ಆಯ್ಕೆಯಾಗಿದೆ. 

ಮರಾಠಿ ಲೇಖಕ ಶರಣ ಕುಮಾರ್ ಲಿಂಬಾಳೆ ಅವರು ಈ ಕೃತಿಯನ್ನು ವಿಠಲರಾವ್‌ ಕನ್ನಡಕ್ಕೆ ತಂದಿದ್ದಾರೆ.  ಡಾ.ಆರ್. ಪೂರ್ಣಿಮಾ, ಎಸ್. ದಿವಾಕರ್ ಮತ್ತು ಡಾ. ಅರವಿಂದ ಮಾಲಗತ್ತಿ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದ ಕೃತಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಪ್ರಶಸ್ತಿ ₹ 50ಸಾವಿರ ನಗದು ಹಾಗೂ ತಾಮ್ರಪತ್ರ ಒಳಗೊಂಡಿದೆ. ವಿವಿಧ ಭಾಷೆಗಳಲ್ಲಿ  ಆಯ್ಕೆಯಾದವರಿಗೆ ಮುಂದಿನ ದಿನಗಳಲ್ಲಿ ಸಮಾರಂಭ ಏರ್ಪಡಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿಕೆ. ಶ್ರೀನಿವಾಸರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು