ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ: ರಾಜ್ಯದ 26 ಅಭ್ಯರ್ಥಿಗಳು ಆಯ್ಕೆ

2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ
Last Updated 30 ಮೇ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2021ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ರಾಜ್ಯದ 26 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ವಿ. ಅವಿನಾಶ್‌ 31ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿ
ದ್ದಾರೆ. ‌ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಕಾನೂನು ಪದವಿ ಓದಿದವರು
ಈ ಬಾರಿ ಹೆಚ್ಚು ಆಯ್ಕೆಯಾಗಿ
ದ್ದಾರೆ. ಆಯ್ಕೆಯಾದವರಲ್ಲಿ ಉತ್ತರ ಕರ್ನಾಟಕದ ಭಾಗದ ಅಭ್ಯರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ರಾಜ್ಯದ 28 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದವ
ರಲ್ಲಿ ಬಹುತೇಕರು ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.

ಚಿತ್ರದುರ್ಗದ ಬೆನಕ ಪ್ರಸಾದ್ ಎನ್. ಜೆ. ಅವರು 92ನೇ ರ‍್ಯಾಂಕ್‌ ಮತ್ತು ವಿಜಯಪುರದ ನಿಖಿಲ್ ಬಸವರಾಜ್ ಪಾಟೀಲ್ 139ನೇ ರ‍್ಯಾಂಕ್‌ ಪಡೆದಿ
ದ್ದಾರೆ. ಶೇ 90ರಷ್ಟು ಅಂಧತ್ವ ಇರುವ ಪಿರಿಯಾಪಟ್ಟಣ ತಾಲ್ಲೂಕು ಕುಡಕೂರಿನ ಕೆ.ಟಿ. ಮೇಘನಾ ಅವರು 425ನೇ ರ‍್ಯಾಂಕ್‌ ಪಡೆದಿದ್ದಾರೆ.

ರಾಜ್ಯದಿಂದ ಆಯ್ಕೆಯಾದವರು

ರ‍್ಯಾಂಕ್‌; ಹೆಸರು

31;ಅವಿನಾಶ್ ವಿ
92;ಬೆನಕ ಪ್ರಸಾದ್ ಎನ್. ಜೆ.
139;ನಿಖಿಲ್ ಬಸವರಾಜ್ ಪಾಟೀಲ್
151;ವಿನಯ್ ಕುಮಾರ್ ಗಾಡ್ಗೆ

155 ಚಿತ್ತರಂಜನ್ ಎಸ್

191;ಅಪೂರ್ವಾ ಬಾಸೂರು
207;ನಿತ್ಯಾ ಆರ್.
219; ಮಂಜುನಾಥ ಆರ್.
222;ಎಂ.ಪಿ.ರಾಜೇಶ್ ಪೊನ್ನಪ್ಪ
250;ಸಾಹಿತ್ಯ ಎಂ ಆಲದಕಟ್ಟಿ
291;ಕಲ್ಪಶ್ರೀ ಕೆ. ಆರ್.
308;ಅರುಣಾ ಎಂ
311;ದೀಪಕ್ ರಾಮಚಂದ್ರ ಶೇಠ್
319;ಗಜಾನನ್ ಬಾಲೆ
318;ಹರ್ಷವರ್ಧನ ಬಿ. ಜೆ.
352;ವಿನಯ್ ಕುಮಾರ್ ಡಿ. ಎಚ್.
425;ಮೇಘನಾ ಕೆ. ಟಿ.
455;ರವಿನಂದನ್ ಬಿ. ಎಂ.
479;ಸವಿತಾ ಗೋಟ್ಯಾಳ್
516;ಮೊಹಮ್ಮದ್ ಸಾಧಿಕ್ ಶರೀಫ್
532;ಚೇತನ್ ಕೆ
568;ನಗ್ರಾಲೆ ಶುಭಂ ಪ್ರಕಾಶ್
641;ಪ್ರಶಾಂತ್ ಕುಮಾರ್ ಬಿ.ಒ.
655;ವೆಂಕಟ್ ರಾಮ್
669;ಚೇತನ್ ಕುಮಾರ್ ಬಿ
682;ಸುಚಿನ್ ಕೆ. ವಿ.

‘ಇನ್‌ಸೈಟ್ಸ್‌ ಐಎಎಸ್‌’ಗೆ ಸಾಧನೆಯ ಗರಿ

ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ಸಂಸ್ಥೆಯಾಗಿರುವ ‘ಇನ್‌ಸೈಟ್ಸ್ ಐಎಸ್ಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ ರಾಜ್ಯದ 20 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಕಾಡೆಮಿಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ.

‘ದೇಶದಾದ್ಯಂತ ಇನ್‌ಸೈಟ್ಸ್‌ನಲ್ಲಿ ತರಬೇತಿ ಪಡೆದ 170ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ 20 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ’ ಎಂದು ಇನ್‌ಸೈಟ್ಸ್‌ ಐಎಎಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ. ವಿನಯಕುಮಾರ್‌ ತಿಳಿಸಿದ್ದಾರೆ.

‘31ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿರುವ ಅವಿನಾಶ್‌ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಇನ್‌ಸೈಟ್ಸ್‌ನಲ್ಲಿ ತರಬೇತಿ ಪಡೆದರು. ಅವಿನಾಶ್‌ ಇನ್‌ಸೈಟ್ಸ್‌ ಅಕಾಡೆಮಿಯಲ್ಲಿ ಪೂರ್ಣ ಪ್ರಮಾಣದ (ಒಪಿಜಿ) ಆಫ್‌ಲೈನ್ ತರಗತಿ ಕಾರ್ಯಕ್ರಮದ ವಿದ್ಯಾರ್ಥಿಯಾಗಿದ್ದರು’ ಎಂದು ವಿವರಿಸಿದ್ದಾರೆ.

’ಅಭ್ಯರ್ಥಿಗಳಿಗೆ ಬೋಧನೆ ಮತ್ತು ಉತ್ತರ ಬರೆಯುವುದು ಸೇರಿದಂತೆ ಕೌಶಲ ವೃದ್ಧಿಯ ಬಗ್ಗೆ ನಮ್ಮ ಕೇಂದ್ರದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಇದು ಒಟ್ಟಾರೆಯಾಗಿ ಇಂಟೆಗ್ರೇಟೆಡ್‌ ಕೋಚಿಂಗ್‌ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾದ ಈ ವಿದ್ಯಾರ್ಥಿಗಳು, ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿಯ ಒಜಿಪಿ, ಕೋರ್‌ ಬ್ಯಾಚ್, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷಾ ಸರಣಿ ಮತ್ತು ಅಣಕು ಸಂದರ್ಶನಗಳಂತಹ ಹಲವಾರು ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷಾ ತಯಾರಿಯನ್ನು ಸರಳೀಕರಿಸಲು ಮತ್ತು ಯಶಸ್ಸು ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇನ್‌ಸೈಟ್ಸ್‌ ಸತತವಾಗಿ ಶ್ರಮಿಸುತ್ತಿದೆ’ ಎಂದು ತಿಳಿಸಿದ್ದಾರೆ.

‘ಇನ್‌ಸೈಟ್ಸ್‌ ಐಎಎಸ್‌’ನಲ್ಲಿ ತರಬೇತಿ ಪಡೆದವರು.

ಹೆಸರು; ರ‍್ಯಾಂಕ್‌

ಅವಿನಾಶ್‌ ವಿ;31

ಎನ್‌. ಜೆ. ಬೆನಕ ಪ್ರಸಾದ್‌;92

ನಿಖಿಲ್‌ ಬಸವರಾಜ ಪಾಟೀಲ್‌;139

ವಿನಯಕುಮಾರ್‌ ಗಾಡ್ಗೆ;151

ಅಪೂರ್ವ ಬಾಸೂರು;191

ನಿತ್ಯಾ ಆರ್‌. 207

ಎಂ.ಪಿ. ರಾಜೇಶ್‌ಪೊಣ್ಣಪ್ಪ;222

ಸಾಹಿತ್ಯ ಎಂ. ಆಲದಕಟ್ಟೆ;250

ಕಲ್ಪಶ್ರೀ ಕೆ.ಆರ್‌;291

ದೀಪಕ್‌ ರಾಮಚಂದ್ರ ಶೇಟ್‌;311

ಹರ್ಷವರ್ಧನ್‌ ಬಿ.ಜೆ.;318

ವಿನಯಕುಮಾರ್‌ ಡಿ.ಎಚ್‌;352

ಮೇಘನಾ ಕೆ.ಟಿ;425

ರವಿನಂದನ್‌ ಬಿ.ಎಂ.;455

ಮೊಹಮ್ಮದ್‌ ಸಿದ್ದಿಖ್‌ ಷರೀಪ್‌;516

ಚೇತನ್‌ ಕೆ;532

ನಾಗರಾಳೆ ಶುಭಂ ಪ್ರಕಾಶ್‌;568

ಪ್ರಶಾಂತ್‌ ಕುಮಾರ್ ಬಿ.ಒ.;641

ವೆಂಕಟರಾಮ್‌;655

ಚೇತನಕುಮಾರ್‌ ಬಿ;699

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT