ಭಾನುವಾರ, ನವೆಂಬರ್ 17, 2019
27 °C

ಕರ್ತಾರಪುರ ಕಾರಿಡಾರ್‌: ಒಮ್ಮತ ಮೂಡದೆ ನಿರ್ಮಾಣಕ್ಕೆ ಅಡ್ಡಿ

Published:
Updated:

ಲಾಹೋರ್: ಭಾರತ ಹಾಗೂ ಪಾಕಿಸ್ತಾನದ ತಾಂತ್ರಿಕ ತಜ್ಞರಲ್ಲಿ ಒಮ್ಮತ ಮೂಡದ ಕಾರಣ ಕರ್ತಾರಪುರ ಕಾರಿಡಾರ್ ಯೋಜನೆಗೆ ಅಡ್ಡಿ ಎದುರಾಗಿದೆ. 

ರಾವಿ ನದಿಗೆ ಸೇತುವೆ ನಿರ್ಮಿಸುವ ಕುರಿತು ನಡೆದ ಸಭೆಯಲ್ಲಿ, ಎರಡೂ ದೇಶದ ತಜ್ಞರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. 

ನದಿಗೆ ರಸ್ತೆ ನಿರ್ಮಿಸಬೇಕು ಎಂದು ಪಾಕಿಸ್ತಾನ ಹೇಳುತ್ತಿದೆ. ರಸ್ತೆ ಎತ್ತರ ಹೆಚ್ಚಿಸಿ ಅಣೆಕಟ್ಟು ನಿರ್ಮಿಸಿದರೆ ಪ್ರವಾಹದಿಂದ ರಕ್ಷಣೆ ಪಡೆಯಬಹುದು ಎನ್ನುವುದು ಪಾಕ್ ತಜ್ಞರ ಅಭಿಪ್ರಾಯ.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ತಜ್ಞರು, ಪ್ರವಾಹ ಉಂಟಾದರೆ ಅಪಾಯ ಎದುರಾಗುತ್ತದೆ. ಹಾಗಾಗಿ 1 ಕಿ.ಮೀ. ಉದ್ದದ ಸೇತುವೆ ನಿರ್ಮಿಸಬೇಕು ಎನ್ನುತ್ತಿದ್ದಾರೆ.  ಈ ಕುರಿತು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. 

ಒಂದು ತಾಸು ನಡೆದ ಸಭೆಯಲ್ಲಿ, ಉಭಯ ದೇಶಗಳ ಪ್ರತಿನಿಧಿಗಳು ಕಾರಿಡಾರ್ ನಿರ್ಮಾಣ ಕುರಿತು ವಿವರ ಹಂಚಿಕೊಳ್ಳಲಾಯಿತು. ಮುಂದಿನ ಸಭೆಯ ದಿನಾಂಕವಿನ್ನೂ ತೀರ್ಮಾನವಾಗಿಲ್ಲ.

ಭಾರತದಲ್ಲಿನ ದೇರಾ ಬಾಬಾ ನಾನಕ್ ಮಂದಿರದಿಂದ ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಕರ್ತಾರಪುರ ಕಾರಿಡಾರ್‌ ನಿರ್ಮಾಣಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿದೆ. 

ಪ್ರತಿಕ್ರಿಯಿಸಿ (+)