ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಲಿನ ಚಿತ್ತಾರ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ತೈಲವರ್ಣ, ಜಲವರ್ಣ, ಅಕ್ರಿಲಿಕ್, ಪ್ಲಾಸ್ಟರ್ ಆಫ್ ಪ್ಯಾರಿಸ್, ಕ್ಲೇ ಮಾಡಲಿಂಗ್, ಥರ್ಮಾಕೋಲ್ ಕಟಿಂಗ್, ವೇದಿಕೆ ನಿರ್ಮಾಣ ಹೀಗೆ ವಿಭಿನ್ನ ಕಲೆಯಲ್ಲಿ ತೊಡಗಿಸಿಕೊಂಡಿರುವವರು ಕೊಪ್ಪಳ ತಾಲ್ಲೂಕಿನ ಕುಗ್ರಾಮ ಇರಕಲ್ಲಗಡದ ಗುರುನಾಥ ಪತ್ತಾರ.

ಇವರ ಕುಂಚದಲ್ಲಿ ಅರಳಿರುವ ಹಂಪಿಯ ಕಮಲಮಹಲ್, ವಿಧಾನಸೌಧ, ತುಂಗಭದ್ರ ಜಲಾಶಯ, ತಾಜ್ ಮಹಲ್, ಇಟಗಿ ಮಹೇಶ್ವರ ದೇವಾಲಯ... ಇತ್ಯಾದಿ ಚಿತ್ರಗಳು ಕಲಾರಸಿಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಹಲವು ಶಾಲಾ- ಕಾಲೇಜುಗಳು ಇವರ ಅಮೋಘ ಕಲೆಗೆ ಸಾಕ್ಷಿಯಾಗಿ ಉಳಿದಿವೆ.

ಕೊಪ್ಪಳದ ಕಿನ್ನಾಳ ಕಲೆ, ಇಟಗಿ ಮಹೇಶ್ವರ ದೇವಾಲಯ, ಗವಿಮಠ, ಜಿಲ್ಲಾಡಳಿತ ಭವನ ಮತ್ತು ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಆನೆಗೊಂದಿ ಕೋಟೆ ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿದೆ.

ದೇಶ ಮಾತ್ರವಲ್ಲದೇ ಕೊರಿಯಾ, ಫ್ರಾನ್ಸ್, ಇಂಗ್ಲೆಂಡ್, ಇಟಲಿಯ ಜನರು ಖರೀದಿಸಿದ್ದಾರೆ. ಸಂಪರ್ಕಕ್ಕೆ 9902131960.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT