ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಮಹಾಕ್ಷೇತ್ರ ವಸಂತಪುರ. ಬೆಂಗಳೂರಿನಿಂದ 1-2 ಕಿ.ಮೀ. ದೂರ ಇರುವ ಈ ಕ್ಷೇತ್ರ ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ. ಸ್ವಾಮಿಯ ದೇಗುಲದಲ್ಲೀಗ ದೀಪಾವಳಿ ಸಂಭ್ರಮ.

ಹೆಚ್ಚಿನ ದೇಗುಲಗಳಲ್ಲಿ ವೆಂಕಟೇಶ್ವರ ಬಲಗೈ ಚಾಚಿ ನಿಂತಿದ್ದರೆ, ಇಲ್ಲಿ ಮಾತ್ರ ಆತ ಅಭಯ ಹಸ್ತ ತೋರಿ ನಿಂತಿರುವುದು ವಿಶೇಷ. ವಲ್ಲಭರಾಯ ಸ್ವಾಮಿ ಶ್ರೀದೇವಿ, ಭೂದೇವಿಯೊಡನೆ ವಸಂತ ಸ್ನಾನವನ್ನು ಮಾಡಿರುವುದರಿಂದ ಈ ಸ್ಥಳಕ್ಕೆ ವಸಂತಪುರವೆಂದು ಹೆಸರು.

ಮದುವೆ ಆಗದೆ ಇರುವವರು ಈ ದೇವರ ಹತ್ತಿರ ಕಂಕಣ ಕಟ್ಟಿಸಿಕೊಂಡರೆ ೪೮ ದಿನಗಳಲ್ಲಿ ಮದುವೆ ಆಗುತ್ತದೆ. ಶ್ರೀ ಗೋಪಾಲಕೃಷ್ಣನಿಗೆ ರೋಹಿಣಿ ನಕ್ಷತ್ರದಲ್ಲಿ ಹದಿನಾರು ವಾರಗಳು ಹಾಲಿನ ಅಭಿಷೇಕ ಮಾಡಿಸಿ ಆ ತೀರ್ಥವನ್ನು ಸೇವಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.

ಈ ಸ್ಥಳದ ಪುರಾಣವನ್ನು ಯಾರು ಓದುತ್ತಾರೋ, ಕೇಳುತ್ತಾರೋ ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ, ಭಾಗ್ಯ, ಕೀರ್ತಿ ಎಲ್ಲವೂ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.

ಹುತ್ತದ ನಡುವೆ ಗಣಪ
50 ವರ್ಷ ಹಳೆಯದಾದ ಅರಳಿ ಮರದ ನಡುವೆ ಒಂದು ಹುತ್ತ. ಈ ನಾಗದೇವತೆಯ ಪ್ರೇರಣೆಯಿಂದ ಪ್ರತಿಷ್ಠಾಪನೆಗೊಂಡಿದೆ ಅಪೂರ್ವದ ಅಭಯ ಗಣಪತಿ ದೇಗುಲ. ಬೆಂಗಳೂರಿನ ಜಯನಗರದಲ್ಲಿ ಶೃಂಗೇರಿ ಮಠದ ಶಿವ ಸ್ವಾಮಿ ಗಳಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇಗುಲದಲ್ಲಿ ದೀಪಾವಳಿ ಆಚರಣೆಯ ವಿಶೇಷವಿದೆ.

ಪ್ರತಿ ನಿತ್ಯ ಅಭಿಷೇಕ, ಶುಕ್ರವಾರ ಶನಿವಾರ ಸಹಸ್ರನಾಮ, ಪೂಜೆ, ಮಲ್ಲಿಗೆ ಅಲಂಕಾರ ಇಲ್ಲಿಯ ವೈಶಿಷ್ಟ್ಯ. ಪ್ರತಿ ಅಮಾವಾಸ್ಯೆ ದುರ್ಗಾ ಹೋಮ ನಡೆಯುತ್ತದೆ. ಆ ದಿನ 3 ರಿಂದ 4 ಸಾವಿರ ಜನಗಳಿಗೆ ಅನ್ನದಾನವಿರುತ್ತದೆ. ಗಣಪತಿಯ ಸನಿಹದಲ್ಲಿದೆ ನಿಮಿಷಾಂಬ ದೇವಿ ವಿಗ್ರಹವಿದೆ. ಹಣೆಯಲ್ಲಿ ಶಿವಲಿಂಗ ಇರುವುದು ಈ ದೇವಿಯ ವಿಶೇಷತೆ. ಪ್ರತಿ ಮಂಗಳವಾರ ಶುಕ್ರವಾರ ದುರ್ಗಾಸಪ್ತಶತಿಯ ಪಾರಾಯಣ, ನಿಂಬೆಹಣ್ಣಿನ ದೀಪಸೇವೆ ಇರುತ್ತವೆ.

ಸಂಪರ್ಕಕ್ಕೆ- ನರಸಿಂಹಮೂರ್ತಿ: 94801 22433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.