ಕಲಿಯುಗ ಕಾಮಧೇನುವೆಂದೇ ಪ್ರಖ್ಯಾತರಾದ ಮಂತ್ರಾಲಯದ ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾದವರು ಲಕ್ಷಾಂತರ ಮಂದಿ. ಅನೇಕ ಗ್ರಾಮ, ನಗರಗಳ ಮೃತ್ತಿಕಾ ಬೃಂದಾವನಗಳಲ್ಲಿ ಕುಳಿತು ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ ರಾಯರು. ಅಂತಹ ರಾಯರ ಮಠಗಳಲ್ಲಿ ತುಮಕೂರಿನ ಚಿಕ್ಕಪೇಟೆ ಆಚಾರ್ಯರ ಬೀದಿಯ ರಾಯರ ಚಿಕ್ಕಮಠವೂ ಒಂದು. ಅಷ್ಟೇ ಅಲ್ಲ, ಕರ್ನಾಟಕದಲ್ಲೆ ಅತಿ ಪ್ರಾಚೀನವಾದ ಈ ಮಠಕ್ಕೀಗ ಶತಮಾನದ ಸಂಭ್ರಮ.

ಶತಮಾನೋತ್ಸವದ ಸಂಬಂಧ ವರ್ಷಪೂರ್ತಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದರ ಅಂಗವಾಗಿ ಇದೇ ೧೯ರಿಂದ ವಾರ್ಷಿಕ ಜ್ಞಾನಸತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಉಪನ್ಯಾಸ ನೀಡಲಿದ್ದಾರೆ. ಜ್ಞಾನಸತ್ರ ಕಾರ್ಯಕ್ರಮದ ಅಂಗವಾಗಿ ಭಾನುವಾರಗಳಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳಾದ ಪವಮಾನ ಹೋಮ, ಹರಿವಾಯುಸ್ತುತಿ ಪುನಶ್ಚರಣೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಪ್ರವಚನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ವರ್ಷಪೂರ್ತಿ ನಡೆಯಲಿವೆ.

ಬೇರೆ ಮಠಗಳಂತೆ ಇದು ಕೇವಲ ಮಠವಾಗಿರದೇ ಅನೇಕ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಪ್ರತಿದಿನ ಸಾಂಪ್ರದಾಯಾನುಸಾರವಾಗಿ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಂಡು ಬರುವುದರ ಜೊತೆ ಹಬ್ಬ ಹರಿದಿನ ಹಾಗೂ ಆರಾಧನೆಗಳ ಆಚರಣೆಗಾಗಿ ಶಾಶ್ವತ ಸೇವಾ ಯೋಜನೆಯನ್ನು ರೂಪಿಸಿದೆ.

ಇಷ್ಟೇ ಅಲ್ಲದೆ ಪ್ರತಿವರ್ಷ ಶ್ರೀಮಠದಿಂದ ದೇವರಾಯನದುರ್ಗದವರೆಗೂ ಕಾರ್ತಿಕ ಮಾಸದಲ್ಲಿ ಪಾದಯಾತ್ರೆಯನ್ನು ಆಯೋಜಿಸುತ್ತಾರೆ. ೧೬ ಕಿ.ಮೀ ದೂರದ ಪಾದಯಾತ್ರೆ ಸಮಯದಲ್ಲಿ ಮಾರ್ಗದುದ್ದಕ್ಕೂ ವೇದ, ಸಚ್ಚಾಸ್ತ್ರ, ಶ್ರೀಸಮದ್ರವಿಜಯ ಪಾರಾಯಣ ಹಾಗೂ ಹರಿನಾಮ ಸಂಕೀರ್ತನೆಗಳನ್ನು ಮಾಡುತ್ತಾ ಸಾಗುತ್ತಾರೆ. ಮೊದಲು ವಿರಳವಾಗಿ ಭಕ್ತರು ಪಾದಯಾತ್ರೆಗೆ ಬರುತ್ತಿದ್ದರು. ಆದರೆ ಈಗೀಗ ಕರ್ನಾಟಕದ ಎಲ್ಲೆಡೆಗಳಿಂದ ಪಾದಯಾತ್ರೆಗೆ ಸಾವಿರಾರು ಜನ ಸೇರುತ್ತಿದ್ದಾರೆ.

ಧಾರ್ಮಿಕ ಆಚರಣೆಗಳು ಉಳಿದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಪ್ರತಿವರ್ಷ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಧಾರ್ಮಿಕ ಆಚರಣೆ, ಸ್ತೋತ್ರ ಹಾಗೂ ದೇವರನಾಮಗಳನ್ನು ಹೇಳಿಕೊಡಲಾಗುತ್ತದೆ. ಐದನೇ ತರಗತಿ ಓದುತ್ತಿರುವ ಇಬ್ಬರು ವಟುಗಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅವರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಬೇಕೆಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಹರಿವಾಯುಸ್ತುತಿ, ಗುರುಗುಣಸ್ತವನ ಮಣಿಮಜರಿ ಪ್ರಮೇಯನವಮಾಲಿಕ ಶ್ರೀರಾಘವೇಂದ್ರ ವಿಜಯ ತೀರ್ಥಪ್ರಬಂಧ ಮೊದಲಾದ ಗ್ರಂಥಗಳನ್ನು ಕಂಠಪಾಠ ಮಾಡಿ ಒಪ್ಪಿಸುವವರಿಗೆ ಬಹುಮಾನ ನೀಡುವ ಯೋಜನೆ ರೂಪಿಸಲಾಗಿದೆ.

ಮಾಧ್ವ ಬಂಧುಗಳ ಮರಣ ಸಂದರ್ಭದಲ್ಲಿ ಅವಶ್ಯಕತೆ ಇದ್ದವರಿಗೆ ಊರ್ಧ್ವಲೋಕ ಕ್ರಿಯೆ (ಅಂತ್ಯೇಷ್ಟಿ) ಗಾಗಿ ಧನಸಹಾಯವನ್ನು ಮಠದವರು ಮಾಡುತ್ತಿದ್ದಾರೆ.

ಮಠದ ಹಿನ್ನೆಲೆ
ಈ ಮಠದ ಸ್ಥಾಪನೆಯಾದ ಹಿನ್ನೆಲೆಯು ಸ್ವಾರಸ್ಯಕರವಾಗಿದೆ. ಗುರುರಾಘವೇಂದ್ರರ ಗುರುಗಳಾಗಿದ್ದ ವಿಜಯೀಂದ್ರ ತೀರ್ಥರು ೩೫೦ ವರ್ಷಗಳ ಹಿಂದೆ ತುಮಕೂರಿಗೆ ಬಂದಿದ್ದರು. ಆಗ ಈ ಮಠದ ಸ್ಥಾಪನೆಗೆ ಕಾರಣರಾದ ವಿಜಯೀಂದ್ರ ಕೃಷ್ಣಾಚಾರ್ರವರ ಪೂರ್ವಜರಿಗೆ ತುಮಕೂರಿನಲ್ಲಿಯೇ ನೆಲೆನಿಂತು ಮುಖ್ಯಪ್ರಾಣದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬರುವಂತೆ ಆಜ್ಞಾಪಿಸಿದರು. ಅದರಂತೆ ವಿಜಯೀಂದ್ರ ಕೃಷ್ಣಾಚಾರ್ರವರ ಪೂರ್ವಜರು ತುಮಕೂರಿನಲ್ಲಿ ನೆಲೆನಿಂತು ಮುಖ್ಯಪ್ರಾಣದೇವರ ಸೇವೆಯಲ್ಲಿ ನಿರತರಾದರು. ಇದೇ ವಂಶದವರಾದ ವಿಜಯೀಂದ್ರ ಕೃಷ್ಣಾಚಾರ್ ಈ ಮುಖ್ಯಪ್ರಾಣದೇವರ ಪೂಜೆ ಮಾಡುತ್ತಿದ್ದರು. ಇವರು ಪರಮ ಸಾತ್ವಿಕರು ಹಾಗೂ ಪರಮ ತಪಸ್ವಿಗಳೂ ಆಗಿದ್ದರು. ಇವರಿಗೆ ಗುರುರಾಯರ ಮೇಲೆ ಎಲ್ಲಿಲ್ಲದ ಭಕ್ತಿ. ದಿನವೂ ಗುರುರಾಯರ ಪೂಜೆ ಮಾಡಬೇಕೆಂಬ ಬಯಕೆ.

ಹಾಗಾಗಿ ಗುರುಹಿರಿಯರ ಜೊತೆ ಚರ್ಚೆ ನಡೆಸಿದ ನಂತರ ಗುರುರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪಿಸಬೇಕೆಂಬ ನಿರ್ಧಾರಕ್ಕೆ ಬಂದರು. ನಂತರ ಮಂತ್ರಾಲಯಕ್ಕೆ ತೆರಳಿ ಗುರುರಾಯರ ಆಜ್ಞೆಯಂತೆ ೧೯೧೪ರ ಶ್ರಾವಣ ಮಾಸದಲ್ಲಿ ಗುರುರಾಘವೇಂದ್ರರ ಮೃತ್ತಿಕಾ ಬೃಂದವನ ಸ್ಥಾಪಿಸಿ ರಾಯರ ಚಿಕ್ಕ ಮಠದ ಸ್ಥಾಪನೆಗೆ ಕಾರಣರಾದರು. ಅಂದಿನಿಂದ ಇಂದಿನವರೆಗೆ ಒಂದು ಶತಮಾನಗಳಿಂದ ಈ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಚಾಚೂ ತಪ್ಪದೇ ನಡೆದುಕೊಂಡು ಬಂದಿದೆ.

ಕೇವಲ ಮಠವಾಗಿ ಉಳಿಯದೇ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೆ ಸನಾತನ ಧರ್ಮ ಧಾರ್ಮಿಕ ಆಚರಣೆಗಳು ಅಳಿಯದಂತೆ ಮುಂದುವರೆಸಿಕೊಂಡು ಹೋಗುತ್ತಿರುವ ಶ್ರೀಮಠದವರ ಕೆಲಸ ನಿಜಕ್ಕೂ ಶ್ಲಾಘನೀಯ. ಈ ಮಠ ಸಾವಿರ ವಸಂತಗಳನ್ನು ಪೂರೈಸಲಿ ಎಂಬುದೇ ಭಕ್ತಾದಿಗಳ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.