ಶನಿವಾರ, ಡಿಸೆಂಬರ್ 7, 2019
22 °C
ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ ಪ್ರತಿಪಾದನೆ

ಕಾಶ್ಮೀರ ಬಿಕ್ಕಟ್ಟಿಗೆ ಯುದ್ಧ ಪರಿಹಾರ ಅಲ್ಲ: ಇಮ್ರಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಇಸ್ಲಾಮಾಬಾದ್‌: ‘ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಕಾಶ್ಮೀರ ಸಮಸ್ಯೆಗೆ ಯುದ್ಧ ಪರಿಹಾರ ಅಲ್ಲ. ಮಾತುಕತೆ ಮೂಲಕವೇ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯ’ ಎಂದು ಪ್ರಧಾನಿ ಇಮ್ರಾನ್‌ಖಾನ್‌ ಪ್ರತಿಪಾದಿಸಿದರು.

ಟಿ.ವಿ ಸಂದರ್ಶನದಲ್ಲಿ ಮಾತ ನಾಡಿದ ಅವರು, ‘ಉಭಯ ದೇಶಗಳ ನಡುವೆ ಮಾತಕತೆ ನಡಯದೇ ಕಾಶ್ಮೀರ ಬಿಕ್ಕಟ್ಟು ಪರಿಹರಿಸಲು ನಮ್ಮ ಮುಂದಿರುವ ಬೇರೆ ಆಯ್ಕೆಗಳ ಕುರಿತು ಚರ್ಚೆ ಸಾಧ್ಯವಿಲ್ಲ’ ಎಂದರು.

‘ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಎರಡು– ಮೂರು ಪರಿಹಾರ ಸೂತ್ರಗಳಿವೆ. ಅವುಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ’ ಎಂದರು.

‘2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳದೇ ಇದ್ದಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಿತ್ತು ಎಂಬ ಮಾತನ್ನು ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಮಾಜಿ ವಿದೇಶಾಂಗ ಸಚಿವ ನಟವರ್‌ಸಿಂಗ್‌ ಹೇಳಿದ್ದರು’ ಎಂದೂ ಅವರು ಸ್ಮರಿಸಿದರು.

‘ಭಾರತದೊಂದಿಗೆ ಯುದ್ಧ ನಡೆಯುವ ಸಾಧ್ಯತೆ ಇಲ್ಲ. ಯುದ್ದದಿಂದ ಅನಪೇಕ್ಷಿತ ಪರಿಣಾಮ ಇರುತ್ತದೆ. ಹೀಗಾಗಿ ಎರಡು ದೇಶಗಳು ಇಂತಹ ಸಾಹಸಕ್ಕೆ ಕೈ ಹಾಕವು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು