ಕೆಐಎಗೆ ರೈಲು ಸಂಪರ್ಕ; ಆನ್‌ಲೈನ್‌ ಅಭಿಯಾನ

7

ಕೆಐಎಗೆ ರೈಲು ಸಂಪರ್ಕ; ಆನ್‌ಲೈನ್‌ ಅಭಿಯಾನ

Published:
Updated:

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸಂಪರ್ಕ ಕಲ್ಪಿಸಬೇಕು ಎಂದು ಚೇಂಜ್‌ ಡಾಟ್‌ ಆರ್ಗ್‌ ಸಂಘಟನೆ ಆನ್‌ಲೈನ್‌ ಅಭಿಯಾನ ಆರಂಭಿಸಿದೆ.

ಆನ್‌ಲೈನ್‌ ಅಭಿಯಾನಕ್ಕೆ ಸುಮಾರು 2 ಸಾವಿರ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಇರುವ ಯಶವಂತಪುರ– ಬೈಯಪ್ಪನಹಳ್ಳಿ ರೈಲು ಮಾರ್ಗ ದೇವನಹಳ್ಳಿ ರೈಲು ನಿಲ್ದಾಣವನ್ನು ಹಾದು ಹೋಗುತ್ತದೆ. ದೇವನಹಳ್ಳಿಯಿಂದ ವಿಮಾನ ನಿಲ್ದಾಣದವರೆಗೆ ಮಾರ್ಗ ವಿಸ್ತರಣೆ ಮಾಡಬೇಕು. ಇಲ್ಲಿ ಎರಡು ಪಥಗಳಲ್ಲಿ ರೈಲು ಓಡಿಸಬಹುದು. ಈ ಮಾರ್ಗಗಳಿಂದ ಯಲಹಂಕದವರೆಗೆ ಸಂಪರ್ಕ ಸಾಧಿಸಲು ಸಾಧ್ಯ. ಇದರಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಉಂಟಾಗುವ ಟ್ರಾಫಿಕ್‌ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂನ ಸಂಸ್ಥಾಪಕ ಎನ್‌.ಎಸ್‌.ಮುಕುಂದ ಅಭಿಪ್ರಾಯಪಟ್ಟಿದ್ದಾರೆ. 

ಯಶವಂತಪುರ ಬೈಯಪ್ಪನಹಳ್ಳಿ ನಿಲ್ದಾಣಗಳು ಮೆಟ್ರೊ ನಿಲ್ದಾಣಗಳ ಸಮೀಪವೇ ಬರುತ್ತವೆ. ನಗರದ ಇತರ ಭಾಗಗಳಿಗೆ ಹೋಗಲು ಮೆಟ್ರೊ ಬಳಸಬಹುದು. ಹೀಗಾಗಿ ವಿಮಾನ ಪ್ರಯಾಣಿಕರಿಗೆ ಎರಡೂ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಮುಂದೆ ಇದೇ ರೈಲುಗಳನ್ನು ಉಪನಗರ ರೈಲು ಯೋಜನೆಯೊಳಗೆ ಸೇರಿಸಿಬಿಡಬಹುದು. ಆದ್ದರಿಂದ ವಿಮಾನ ನಿಲ್ದಾಣದ ಆಡಳಿತ, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ರೈಲ್ವೆ ಇಲಾಖೆ ಪರಸ್ಪರ ಮಾತುಕತೆ ನಡೆಸಿ ಈ ಯೋಜನೆಯು ಮುಂದಿನ ವರ್ಷದ ಮಧ್ಯಭಾಗದೊಳಗೆ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಅಂಡರ್‌ಪಾಸ್‌ಗಳು, ಪರ್ಯಾಯ ರಸ್ತೆಗಳು ಸಮಸ್ಯೆಯನ್ನು ಬಗೆಹರಿಸಲಾರವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2017–18ನೇ ಸಾಲಿನಲ್ಲಿ ಈ ವಿಮಾನ ನಿಲ್ದಾಣದ ಮೂಲಕ 2.7 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. 3.50 ಲಕ್ಷ ಟನ್‌ ಸರಕು ಸಾಗಾಟ ನಡೆದಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ಈ ನಿಲ್ದಾಣಕ್ಕೆ ಹೈಸ್ಪೀಡ್‌ ರೈಲು ಸಂಪರ್ಕ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆನ್‌ಲೈನ್‌ ಅಭಿಯಾನದಲ್ಲಿ ಪಾಲ್ಗೊಳ್ಳುವವರು https://chn.ge/2xaINuf ಕೊಂಡಿಯನ್ನು ಕ್ಲಿಕ್‌ ಮಾಡಿ ಬೆಂಬಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !