ಬುಧವಾರ, ಡಿಸೆಂಬರ್ 11, 2019
27 °C

ಕ್ಯಾಥೋಲಿಕ್ ಬಿಷಪ್‌ಗಳ ಅಯೋಗ್ಯರು, ಅವರನ್ನು ಕೊಲ್ಲಿ: ರೋಡ್ರಿಗೊ ಡುಟೆರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಮನಿಲಾ: ‘ಕ್ಯಾಥೋಲಿಕ್ ಬಿಷಪ್‌ಗಳು ಅಯೋಗ್ಯರು. ಅವರನ್ನು ಕೊಲ್ಲಬೇಕು’ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡುಟೆರ್ಟ್ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿರುವ ಡುಟೆರ್ಟ್ ಅವರ ಭಾಷಣದಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ದೇಶದ ಶೇ 85ರಷ್ಟು ಜನರು ಕ್ಯಾಥೋಲಿಕ್ ಸಮುದಾಯದವರೇ ಆಗಿದ್ದಾರೆ.

‘ಇಡೀ ಫಿಲಿಪ್ಪೀನ್ಸ್‌ನಲ್ಲಿ ಕ್ಯಾಥೋಲಿಕ್ ಚರ್ಚ್‌ಗಳು ಬೂಟಾಟಿಕೆಯ ಕೇಂದ್ರಗಳು. ಶೇ 90ರಷ್ಟು ಪಾದ್ರಿಗಳು ಸಲಿಂಗಿಗಳು. ಟೀಕೆ ಮಾಡುವುದಷ್ಟೇ ಅವರ ಕೆಲಸ’ ಎಂಬುದಾಗಿ ಡುಟೆರ್ಟ್ ಟೀಕಿಸಿದ್ದಾರೆ ಎಂದು ಇಎಫ್‌ಇ ನ್ಯೂಸ್ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಫಿಲಿಪ್ಪೀನ್ಸ್‌ನ ಕ್ಯಾಥೋಲಿಕ್ ಸಭೆ ನಿರಾಕರಿಸಿದೆ. 

ಮೂರ್ಖರನ್ನು ನೋಡಲು ಫಿಲಿಪ್ಪೀನ್ಸ್ ಜನರು ಚರ್ಚ್‌ಗಳಿಗೆ ಹೋಗಬಾರದು ಎಂದು ಇತ್ತೀಚೆಗೆ ಅವರು ಕರೆ ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು