ಸೋಮವಾರ, ಏಪ್ರಿಲ್ 12, 2021
26 °C

ಕಿರಣ್ ಮಜುಂದಾರ್ ಶಾ ದಂಪತಿಯಿಂದ ₹51.41 ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ಅವರ ಪತಿ ಜಾನ್ ಶಾ ಅವರು ಸ್ಕಾಟ್ಲೆಂಡ್‌ನಲ್ಲಿರುವ ಗ್ಲಾಸ್ಗೊ ವಿಶ್ವವಿದ್ಯಾಲಯಕ್ಕೆ ₹ 51.41 ಕೋಟಿ ದೇಣಿಗೆ ನೀಡಿದ್ದಾರೆ.

‘ವಿಶ್ವವಿದ್ಯಾಲಯ ಪ್ರಮುಖ ವಿಸ್ತರಣಾ ಯೋಜನೆ ಕೈಗೊಳ್ಳುತ್ತಿರುವ ಈ ವೇಳೆ, ನೆರವು ನೀಡಲು ಸಾಧ್ಯವಾಗಿರುವುದು ಹಳೆಯ ವಿದ್ಯಾರ್ಥಿಯಾದ ನನಗೆ ಸಂತಸ ತಂದಿದೆ. ನಾನು ಹಾಗೂ ಕಿರಣ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸುತ್ತಿರುವುದು ಹೆಮ್ಮೆ ಆಗುತ್ತಿದೆ’ ಎಂದು ಬಯೊಕಾನ್ ಉಪಾಧ್ಯಕ್ಷರೂ ಆಗಿರುವ ಜಾನ್ ಹೇಳಿದ್ದಾರೆ.

‘ನಮ್ಮ ಬಯೊಕಾನ್ ಕಂಪನಿಯ ಯಶಸ್ಸಿನಿಂದಲೇ, ನಾವು ದಾನಿಗಳಾಗಲು ಅವಕಾಶ ದೊರಕಿದೆ. ಗ್ಲಾಸ್ಗೊ ವಿ.ವಿಯಲ್ಲಿ ಕೈಗೊಳ್ಳುವ ಸಂಶೋಧನೆ, ಬಯೊಕಾನ್‌ನ ಪ್ರಮುಖ ಆಸಕ್ತಿಗಳಾದ ಮಧುಮೇಹ ಹಾಗೂ ಕ್ಯಾನ್ಸರ್ ಚಿಕಿತ್ಸೆಯನ್ಗೆನು ಪ್ರತಿನಿಧಿಸುವಂತಹುದು’ ಎಂದು ಅವರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು