ಮಾರಾಟವಾಗದೆ ಉಳಿದಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್ ಅವರನ್ನು ಮೂಲ ಬೆಲೆ ₹ 2 ಕೋಟಿ ನೀಡಿ ಆರ್‌ಸಿಬಿ ಖರೀದಿಸಿದೆ.
ಜೊತೆಗೆ ಶ್ರೀಲಂಕಾ ಮಧ್ಯಮವೇಗಿ ಇಸುರು ಉದಾನ ಅವರೂ ಆರ್‌ಸಿಬಿ ಕ್ಯಾಂಪ್ ಸೇರಿದ್ದಾರೆ.
ಕರ್ನಾಟಕ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಯಾವುದೇ ತಂಡಕ್ಕೆ ಮಾರಾಟವಾಗಿಲ್ಲ.
ಕನ್ನಡಿಗ ಪವನ್ ದೇಶಪಾಂಡೆ ಅವರನ್ನು ₹ 20 ಲಕ್ಷಕ್ಕೆ ಆರ್‌ಸಿಬಿ ಖರೀದಿಸಿದೆ.
ಮತ್ತೆ ಮಾರಾಟವಾಗಲಿಲ್ಲ ಡೇಲ್ ಸ್ಟೇಯ್ನ್
ಮಧ್ಯಮವೇಗದ ಬೌಲರ್ ಮೋಹಿತ್ ಶರ್ಮಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹ 50 ಲಕ್ಷಕ್ಕೆ ಖರೀದಿಸಿದೆ.
ಹರಾಜು ಕಣದಲ್ಲಿದ್ದ ಹಿರಿಯ ಆಟಗಾರ ಪ್ರವೀಣ್ ತಾಂಬೆ ಅವರನ್ನು ಕೆಕೆಆರ್ ತಂಡ ₹ 20 ಲಕ್ಷಕ್ಕೆ ಖರೀದಿಸಿದೆ.
ವೆಸ್ಟ್ ಇಂಡೀಸ್‌ನ ಒಶಾನೆ ಥಾಮಸ್ ಅವರನ್ನು ರಾಜಸ್ಥಾನ ರಾಯಲ್ಸ್ ₹ 50 ಲಕ್ಷಕ್ಕೆ ಖರೀದಿಸಿದೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ಅವರನ್ನು ಆರ್‌ಸಿಬಿ ₹ 4 ಕೋಟಿಗೆ ಖರೀದಿಸಿದೆ.
ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ಹಾಗೂ ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ ಯಾವುದೇ ತಂಡಕ್ಕೆ ಮಾರಾಟವಾಗಿಲ್ಲ.
ಭಾರತ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಿ ದಂಡನೆಗೆ ಒಳಗಾಗಿದ್ದ ಕೆಸ್ರಿಕ್ ವಿಲಿಯಮ್ಸ್ ಅವರನ್ನು ಯಾವ ಪ್ರಾಂಚೈಸ್ ಕೂಡ ಖರೀದಿಸಿಲ್ಲ.
ಕೆಸ್ರಿಕ್ ಮೂಲ ಬೆಲೆ ₹ 50 ಲಕ್ಷ.