ಶನಿವಾರ, ಮೇ 21, 2022
25 °C

ಸ್ಥಳೀಯ ಸಂಸ್ಥೆಗಳ ಚುನಾವಣೆ:ಜಿಲ್ಲಾಧಿಕಾರಿ ಅಧಿಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆ ಹೊರಡಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಅವಧಿಯು ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಮೇ 16 ಕಡೆ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕಡೆ ದಿನ. ಮತದಾನ ಅವಶ್ಯವಿದ್ದರೆ ಮೇ 29ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರುಮತದಾನ ಅವಶ್ಯವಿದ್ದಲ್ಲಿ ಮೇ 30ರಂದು ನಡೆಸಲಾಗುತ್ತದೆ. ಮೇ 31ರಂದು ಬೆಳಿಗ್ಗೆ 8 ಗಂಟೆಗೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ಕಾರ್ಯವು ಆರಂಭವಾಗಲಿದೆ. ಮೇ 31ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಮೀಸಲಾತಿ ವಿವರ:ಗುಂಡ್ಲುಪೇಟೆ ಪುರಸಭೆಯ 23 ವಾರ್ಡುಗಳು, ಹನೂರು ಪಟ್ಟಣ ಪಂಚಾಯಿತಿಯ 13 ವಾರ್ಡುಗಳು, ಯಳಂದೂರು ಪಟ್ಟಣ ಪಂಚಾಯಿತಿಯ 11 ವಾರ್ಡುಗಳಿಗೆ ಚುನಾವಣೆ ನಿಗದಿಯಾಗಿದ್ದು ಮೀಸಲಾತಿ ವಿವರ ಇಂತಿದೆ.

ಗುಂಡ್ಲುಪೇಟೆ ಪುರಸಭೆ:ವಾರ್ಡು ಸಂಖ್ಯೆ 1 - ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 2 - ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 3 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 4 - ಸಾಮಾನ್ಯ, ವಾರ್ಡ್ ಸಂಖ್ಯೆ 5 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 6 - ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 7 - ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 8 - ಸಾಮಾನ್ಯ, ವಾರ್ಡ್ ಸಂಖ್ಯೆ 9 - ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 10 - ಸಾಮಾನ್ಯ, ವಾರ್ಡ್ ಸಂಖ್ಯೆ 11 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 12 - ಸಾಮಾನ್ಯ, ವಾರ್ಡ್ ಸಂಖ್ಯೆ 13- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ 14– ಸಾಮಾನ್ಯ, ವಾರ್ಡ್ ಸಂಖ್ಯೆ 15- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 16- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 17- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ 18- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 19- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 20- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 21- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 22- ಸಾಮಾನ್ಯ, ವಾರ್ಡ್ ಸಂಖ್ಯೆ 23- ಸಾಮಾನ್ಯ ಮಹಿಳೆ.

ಹನೂರು ಪಟ್ಟಣ ಪಂಚಾಯಿತಿ:ವಾರ್ಡು ಸಂಖ್ಯೆ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3- ಸಾಮಾನ್ಯ, ವಾರ್ಡ್ ಸಂಖ್ಯೆ 4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 5 - ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 6- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 7- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಸಾಮಾನ್ಯ, ವಾರ್ಡ್ ಸಂಖ್ಯೆ 10- ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 11- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 12- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 13- ಪರಿಶಿಷ್ಟ ಜಾತಿ.

ಯಳಂದೂರು ಪಟ್ಟಣ ಪಂಚಾಯಿತಿ: ವಾರ್ಡು ಸಂಖ್ಯೆ 1- ಸಾಮಾನ್ಯ, ವಾರ್ಡ್ ಸಂಖ್ಯೆ 2- ಸಾಮಾನ್ಯ, ವಾರ್ಡ್ ಸಂಖ್ಯೆ 3– ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 5- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 6- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 7- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ 8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 10- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 11- ಸಾಮಾನ್ಯ ಮಹಿಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು