ಗುರುವಾರ , ನವೆಂಬರ್ 21, 2019
24 °C

ಸಿಖ್‌ ಮಂದಿರಕ್ಕೆ ಹಾನಿ: ಆರೋಪಿಗೆ 16 ತಿಂಗಳ ಶಿಕ್ಷೆ

Published:
Updated:

ವಾಷಿಂಗ್ಟನ್‌: 2017ರಲ್ಲಿ ಸಿಖ್‌ ಮಂದಿರಕ್ಕೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. 

ಆರ್ಟಿಯೋಮ್ ಮನುಕ್ಯಾನ್(29) ಶಿಕ್ಷೆಗೊಳಗಾದ ಅಪರಾಧಿ.

ಆಗಸ್ಟ್ 2107ರಲ್ಲಿ ಸಿಖ್‌ ಸಮುದಾಯದವರಿಗೆ ಬೆದರಿಕೆ ಒಡ್ಡುವ ಉದ್ದೇಶದಿಂದ, ಲಾಸ್ ಫೆಲಿಜ್‌ನಲ್ಲಿರುವ ಸಿಖ್ ಮಂದಿರದ ಹೊರಗೆ ದ್ವೇಷಪೂರಿತ ಬರಹ ಪ್ರಕಟಿಸಿದ ಆರೋಪ ಈತನ ಮೇಲಿದೆ.

ಈ ಘಟನೆಗೂ ಹಿಂದೆ ಈತನನ್ನು ಕಳ್ಳತನ, ಆಟೊ ಕಳವು, ಕ್ರಿಮಿನಲ್‌ ಬೆದರಿಕೆ ಒಡ್ಡಿದ ಶಂಕೆಯ ಮೇಲೆ ಬಂಧಿಸಲಾಗಿತ್ತು.

ಕ್ಯಾಲಿಫೋರ್ನಿಯಾದ್ಯಂತ ಕಳೆದ ವರ್ಷದಿಂದ ದ್ವೇಷದ ಅಪರಾಧದ ಪ್ರಮಾಣ ಶೇ 11.5 ರಷ್ಟು ಹೆಚ್ಚಳವಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಪ್ರತಿಕ್ರಿಯಿಸಿ (+)