ಮರೀಚಿಕೆಯಾದ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ..!

7
2.59 ಲಕ್ಷ ಶೌಚಾಲಯಗಳ ಪೈಕಿ 2,37.970 ಶೌಚಾಲಯಗಳ ನಿರ್ಮಾಣ

ಮರೀಚಿಕೆಯಾದ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ..!

Published:
Updated:

ವಿಜಯಪುರ: ಮಹಾತ್ಮನ 150ನೇ ಜನ್ಮದಿನದಂದು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕು ಎಂಬ ಜಿಲ್ಲಾ ಪಂಚಾಯ್ತಿ ಆಡಳಿತದ ಸರ್ವ ಯತ್ನಕ್ಕೆ ಜಾಗ, ನೀರಿನ ಸಮಸ್ಯೆ, ಮೂಢನಂಬಿಕೆ ಅಡ್ಡಿಯಾಗಿ ಕಾಡಿವೆ.

ತನ್ನ ಕನಸಿನ ಸಾಕಾರಕ್ಕಾಗಿ ಜನರಲ್ಲಿ ಅರಿವು ಮೂಡಿಸಲು ಎರಡು ಸ್ವಚ್ಛ ರಥದ ಸಂಚಾರಿ ವಾಹನಗಳು ಜಿಲ್ಲೆಯ 213 ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ವಿಡಿಯೊ, ಆಡಿಯೊ ಕ್ಲಿಪ್ಪಿಂಗ್‌ಗಳ ಮೂಲಕ, ಗೋಡೆ ಬರಹ, ಭಿತ್ತಿಪತ್ರ ವಿತರಣೆ ಸೇರಿದಂತೆ ಇನ್ನಿತರೆ ಪ್ರಚಾರ ತಂತ್ರ ಬಳಸಿದರೂ; ಯೋಜನೆ ಯಶಸ್ವಿಯಾಗದಿರುವುದು ಜಿಲ್ಲಾ ಪಂಚಾಯ್ತಿ ಆಡಳಿತಕ್ಕೆ ಹಿನ್ನಡೆಯಾದಂತಾಗಿದೆ.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಘೋಷಣೆಗೆ 2.59 ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಈ ಪೈಕಿ ಇದೂವರೆಗೂ 2,37.970 (ಶೇ 91.70) ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಂತೆ 50 ಗ್ರಾಮ ಪಂಚಾಯ್ತಿಯ 250 ಗ್ರಾಮಗಳನ್ನು ಬಹಿರ್ದಸೆ ಮುಕ್ತ ಎಂದು ಘೋಷಿಸಲಾಗಿದೆ.

ಬಸವನಬಾಗೇವಾಡಿ 44,492 (ಶೇ 99.99), ವಿಜಯಪುರ 59,738 (ಶೇ 92.15), ಇಂಡಿ 58,220 (ಶೇ 92.30), ಮುದ್ದೇಬಿಹಾಳ 34,169 (ಶೇ 95.18), ಸಿಂದಗಿ 41,351 (ಶೇ 80.73) ಶೌಚಾಲಯ ನಿರ್ಮಾಣಗೊಂಡಿವೆ. ಉಳಿದವನ್ನು ನವೆಂಬರ್‌ 8ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ ತಿಳಿಸಿದರು.

‘ರಾಜ್ಯ ಸರ್ಕಾರದ ನಿರ್ದೇಶನದಂತೆ ಅ.2ರೊಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಲಾಗಿದೆ. ಆದರೂ ಬಹುತೇಕ ಹಳ್ಳಿಗಳಲ್ಲಿ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಘೋಷಣೆಗೆ ಹಿನ್ನಡೆಯಾಗಿದೆ. ಸರಿಯಾಗಿ ಜಾಗೃತಿ ಮೂಡಿಸದ ಪಿಡಿಒಗಳನ್ನು ಅಮಾನತುಗೊಳಿಸಿ, ಕೆಲವರಿಗೆ ನೋಟಿಸ್‌ ನೀಡಿ ಕಾರಣ ಕೇಳಲಾಗಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !