ಮೇಯರ್‌, ಆಯುಕ್ತರ ಬಂಗಲೆ ನಿರ್ಮಾಣ ಯೋಜನೆ ರದ್ದು

7

ಮೇಯರ್‌, ಆಯುಕ್ತರ ಬಂಗಲೆ ನಿರ್ಮಾಣ ಯೋಜನೆ ರದ್ದು

Published:
Updated:

ಬೆಂಗಳೂರು: ಬಿಬಿಎಂಪಿ ಮೇಯರ್‌ ಹಾಗೂ ಆಯುಕ್ತರಿಗಾಗಿ ಎರಡು ಬಂಗಲೆ ನಿರ್ಮಿಸುವ ಯೋಜನೆಯನ್ನು ನೂತನ ಮೇಯರ್‌ ಗಂಗಾಂಬಿಕೆ ರದ್ದುಪಡಿಸಿದ್ದಾರೆ.

ಉಭಯರಿಗೆ ಪ್ರತ್ಯೇಕ ಬಂಗಲೆ ನಿರ್ಮಿಸಲು ಒಟ್ಟು ₹ 5 ಕೋಟಿಯನ್ನು ಬಿಬಿಎಂಪಿ 2018–19ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಿತ್ತು. ಮೇಯರ್‌ಗೆ ಗಾಂಧಿ ನಗರದಲ್ಲಿ ಹಾಗೂ ಆಯುಕ್ತರಿಗೆ ಶಾಂತಿ ನಗರದಲ್ಲಿ ಬಂಗಲೆ ನಿರ್ಮಿಸಲು ನಿವೇಶನ ಗುರುತಿಸಲಾಗಿತ್ತು.

‘ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು, ಪಾಲಿಕೆಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ಈ ಯೋಜನೆಯನ್ನು ಕೈಬಿಟ್ಟಿದ್ದೇನೆ.
ನನ್ನ ಅವಧಿಯಲ್ಲಿ ಬಂಗಲೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಮೇಯರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ  ಪ್ರತಿಕ್ರಿಯಿಸಿದ ಮಾಜಿ ಮೇಯರ್‌ ಸಂಪತ್‌ರಾಜ್‌, ‘ಈ ವಿಚಾರ ನೂತನ ಮೇಯರ್‌ ಅವರ ವಿವೇಚನೆಗೆ ಬಿಟ್ಟದ್ದು’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !