ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‍ನ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಅನೂಹ್ಯ’

Last Updated 29 ಜನವರಿ 2020, 20:00 IST
ಅಕ್ಷರ ಗಾತ್ರ

ಮಕ್ಕಳಿಗೆ ಈಗ ಪರೀಕ್ಷಾ ಸಮಯ. ಇನ್ನೇನು ಕೆಲವು ವಾರ ಕಳೆದರೆ, ಬೇಸಿಗೆ ರಜೆ ಆರಂಭವಾಗುತ್ತದೆ. ಈ ಹಿಂದೆ ಮಕ್ಕಳು ರಜೆಯಲ್ಲಿ ಅಜ್ಜ-ಅಜ್ಜಿ ಮನೆಗೆ ಹೋಗುತ್ತಿದ್ದರು. ಈಗ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಬಹುತೇಕ ಶಿಬಿರಗಳು ಹೆಸರಿಗೆ ಮಾತ್ರ ಎಂಬಂತಿರುತ್ತವೆ. ಪೋಷಕರಿಗೆ ಮಕ್ಕಳನ್ನು ಯಾವ ಶಿಬಿರಕ್ಕೆ ಕಳುಹಿಸಬೇಕು ಎಂಬುದೇ ತಲೆನೋವಾಗಿರುತ್ತದೆ. ಇದಕ್ಕೆ ಅಪವಾದದಂತಿದೆ ಅನೂಹ್ಯ ಬೇಸಿಗೆ ಶಿಬಿರ.

ಮಕ್ಕಳ ಸಮಾಲೋಚಕಿ ಡಾ. ರೂಪಾ ರಾವ್ ನಡೆಸುವ 10 ದಿನಗಳ ಅನೂಹ್ಯ ಬೇಸಿಗೆ ಶಿಬಿರದ ಅನನ್ಯತೆಯನ್ನು ಗುರುತಿಸಿ, ಬ್ರಿಟನ್‍ನ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ಸ್‌ ವಿಶ್ವ ದಾಖಲೆಯ ಗೌರವ ಸಲ್ಲಿಸಿದೆ. ಈ ಶಿಬಿರದ ವಿಶೇಷತೆ ಎಂದರೆ, ಜೀವನ ಕೌಶಲಗಳನ್ನೇ ಪ್ರಧಾನವಾಗಿ ಚಟುವಟಿಕೆಗಳ ಮೂಲಕ ಕಲಿಸುವುದಾಗಿದೆ.

ಇಲ್ಲಿ ಮಕ್ಕಳಿಗೆ ದಿನ ನಿತ್ಯದ ಪ್ರಾರ್ಥನೆಯ ಮಹತ್ವ ತಿಳಿ ಹೇಳಿಕೊಡಲಾಗುತ್ತದೆ. ಮಹಾಕಾವ್ಯಗಳ ಬಗ್ಗೆ ಅರಿವು ಮೂಡಿಸಿ, ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಕುತೂಹಲ ಮೂಡಿಸಲಾಗುತ್ತದೆ. ವೈಯಕ್ತಿಕ ಮೌಲ್ಯಗಳು, ಸಾಹಸ ಕ್ರೀಡೆಗಳು, ಅಮ್ಮನ ಮಮತೆ, ಅಜ್ಜ-ಅಜ್ಜಿಯರ ಪ್ರೀತಿ, ಗುರುಗಳ ಮಾರ್ಗದರ್ಶನ, ಸ್ನೇಹಿತರ ಪ್ರೀತಿ ವಿಶ್ವಾಸ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಇಲ್ಲಿ ಹೇಳಿಕೊಡಲಾಗುತ್ತದೆ.

ಮಹಾಭಾರತ, ಭಗವದ್ಗೀತೆ, ರಾಮಾಯಣ, ಮಳೆ ನೀರಿನ ನೃತ್ಯ, ನಕ್ಷತ್ರಗಳ ಹುಡುಕುವಿಕೆ, ಮ್ಯಾಜಿಕ್.. ಹೀಗೆ ನಾನಾ ಚಟುವಟಿಕೆಗಳಿರುತ್ತವೆ. ವೈಯಕ್ತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಗತ್ಯವಾದ ಸಂವಹನ ಕಲೆ, ಸೃಜನಾತ್ಮಕ ಚಿಂತನೆ, ಮತ್ತೊಬ್ಬರಿಗೆ ಋಣಿಯಾಗುವುದು ಹೀಗೆ ಆದರ್ಶಗಳ ಬಗ್ಗೆಯೂ ಇಲ್ಲಿ ಅರಿವು ಮೂಡಿಸಲಾಗುತ್ತದೆ.

ಹಲವಾರು ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ರೂಪಾ ರಾವ್ ಭಾಜನರಾಗಿದ್ದಾರೆ. 2010ರಲ್ಲಿ ರೂಪಾ ಈ ಶಿಬಿರವನ್ನು ಆರಂಭಿಸಿದ್ದರು. ‘ಈ 10 ದಿನಗಳ ಶಿಬಿರದಲ್ಲಿ 32ಕ್ಕೂ ಅಧಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆಧ್ಯಾತ್ಮಿಕತೆಯಿಂದ ವೈಜ್ಞಾನಿಕತೆವರೆಗೆ ಶಿಬಿರದಲ್ಲಿ ಮಕ್ಕಳಿಗೆ ತಿಳಿಸುತ್ತೇವೆ’ ಎನ್ನುತ್ತಾರೆ ರೂಪಾ.

ಈ ವರ್ಷ ಏಪ್ರಿಲ್ 22ರಿಂದ 10ದಿನಗಳ ಕಾಲ ಈ ಶಿಬಿರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT